ಮಹಾಜನರೇ ಎಚ್ಚರ ಎಚ್ಚರ..! ಮಂಗಳವಾರ, ಬುಧವಾರ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ

Public TV
2 Min Read

ಬೆಂಗಳೂರು: ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಒಟ್ಟು ಹನ್ನೇರಡು ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಮುಷ್ಕರಕ್ಕೆ ಕರೆ ಕೊಟ್ಟಿದೆ. ಎಐಟಿಸಿ, ಐಎನ್‍ಟಿಯುಸಿ, ಸಿಐಟಿಯು ಸೇರಿದಂತೆ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕರೆಕೊಟ್ಟ ಬಂದ್‍ಗೆ ದೋಸ್ತಿ ಸರ್ಕಾರ ಪರೋಕ್ಷ ಬೆಂಬಲ ನೀಡಿದಂತೆ ಕಾಣುತ್ತಿದೆ. ಬಿಎಂಟಿಸಿ ಹಾಗೂ ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ಗಳು ಸ್ತಬ್ಧವಾಗಲಿವೆ.

ಏನಿರಲ್ಲ?
* ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸೇವೆ
* ಆಟೋ, ಟ್ಯಾಕ್ಸಿ ಸಂಚಾರ ಅನುಮಾನ
* ಅಂಗನವಾಡಿ, ಬ್ಯಾಂಕ್ ಸೇವೆ
* ಗಾರ್ಮೆಂಟ್ಸ್, ಫ್ಯಾಕ್ಟರಿ ಕ್ಲೋಸ್
* ಕರಾವಳಿ ಭಾಗದಲ್ಲಿ ಖಾಸಗಿ ಬಸ್ ಸೇವೆ

ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ಗಳ ಓಡಾಟ ಇರಲ್ಲ. ಒಟ್ಟು 26 ಸಾವಿರ ನಾಲ್ಕು ನಿಗಮದ ಬಸ್ ಸ್ತಬ್ಧವಾಗಲಿದೆ. ಎಆರ್ ಡಿಯು ಆಟೋ ಸಂಘಟನೆ ಬೆಂಬಲ ನೀಡಿದ್ದರಿಂದ ಬಹುತೇಕ ಆಟೋ ಸಂಚಾರ ಅನುಮಾನ. ಟ್ಯಾಕ್ಸಿ ಮಾಲೀಕರ ಸಂಘ ಕೂಡ ಬೆಂಬಲ ಕೊಟ್ಟಿದೆ. ಇನ್ನು ಅಂಗನವಾಡಿ ನೌಕರರು ಮುಷ್ಕರದಲ್ಲಿ ಭಾಗಿಯಾಗುತ್ತಿದ್ದು ಅಂಗನವಾಡಿಗಳು ಬಂದ್ ಆಗಲಿವೆ. ಬ್ಯಾಂಕ್ ನೌಕರರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ತಿರೋದ್ರಿಂದ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಲಕ್ಷಾಂತರ ಮಂದಿ ಗಾರ್ಮೆಂಟ್ಸ್ ನೌಕರರು ಬಂದ್‍ನಲ್ಲಿ ಭಾಗವಹಿಸೋದ್ರಿಂದ ಎಲ್ಲಾ ಫ್ಯಾಕ್ಟರಿಗಳು ಕ್ಲೋಸ್ ಆಗಿರಲಿವೆ. ಕರಾವಳಿ ಭಾಗದಲ್ಲಿ ಖಾಸಗಿ ಬಸ್‍ಗಳ ಸಂಚಾರ ಕೂಡ ಇರಲ್ಲ

ಸರ್ಕಾರಿ ನೌಕರರು, ಚಿತ್ರೋದ್ಯಮದ ಮಂದಿ, ಬೀದಿ ಬದಿ ವ್ಯಾಪಾರಿಗಳು, ಎಪಿಎಂಸಿ ಬಂದ್‍ಗೆ ನೈತಿಕ ಬೆಂಬಲ ಘೋಷಿಸಿದ್ದಾರೆ. ಓಲಾ, ಉಬರ್ ಬಂದ್‍ಗೆ ನೈತಿಕ ಬೆಂಬಲ ನೀಡಿವೆ. ಕ್ಯಾಬ್ ರಸ್ತೆಗಿಳಿಸದೇ ಇರುವ ಬಗ್ಗೆ ಇನ್ನಷ್ಟೇ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಹೋಟೆಲ್ ಕೂಡ ಓಪನ್ ಇರೋದು ಡೌಟ್. ಶಾಲಾ ಕಾಲೇಜು ಬಂದ್ ಮಾಡುವ ನಿರ್ಧಾರ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ.

ಏನಿರುತ್ತೆ ?
* ಆಸ್ಪತ್ರೆಗಳು, ಮೆಡಿಕಲ್ ಶಾಪ್
* ಆ್ಯಂಬುಲೆನ್ಸ್ ಸೇವೆ
* ಹಾಲು, ತರಕಾರಿ, ಪೇಪರ್

ಬಂದ್ ನಡೆಯುವ ಎರಡೂ ದಿನ ನಿತ್ಯದ ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗಳು, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್ ಸೇವೆಗಳು ಇರುತ್ತವೆ. ಬೆಳಗ್ಗೆ ಹಾಲು, ತರಕಾರಿ, ಪೇಪರ್ ಲಭ್ಯ ಇರುತ್ತವೆ. ಬಂದ್ ದಿನ ಕಾರ್ಮಿಕ ಸಂಘಟನೆಗಳು ಬೆಂಗಳೂರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಟೌನ್ ಹಾಲ್, ಮಿನರ್ವ ವೃತ್ತದಿಂದ ಫ್ರೀಡಂಪಾರ್ಕ್ ವರೆಗೆ ನಡೆವ ರ್ಯಾಲಿಯಲ್ಲಿ ಲಕ್ಷಾಂತರ ಕಾರ್ಮಿಕರು ಪಾಲ್ಗೊಳ್ಳಲಿದ್ದು, ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸೋ ಸಾಧ್ಯತೆ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *