ರಾಯಚೂರು: ಟ್ರ‍್ಯಾಕ್ಟರ್‌ಗೆ ಮರಳು ತುಂಬಿದ್ದ ಲಾರಿ ಡಿಕ್ಕಿಯಾಗಿ ರೈತ ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ (Raichuru) ನಡೆದಿದೆ. ಸಚಿವ ಬೋಸರಾಜು (NS Bosaraju) ಅವರು ಮಾರ್ಗಮಧ್ಯೆ ಘಟನೆ ಕಂಡು ಸ್ಥಳಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ.
ಮೃತರನ್ನು ನಾಗರಾಜ ಕೋರ್ಕಲ್ (50) ಎಂದು ಗುರುತಿಸಲಾಗಿದ್ದು, ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್, ಅಮೆರಿಕ ವಾಯುನೆಲೆಗಳ ಮೇಲೆ ದಾಳಿ ಮಾಡ್ತೀವಿ: ಟ್ರಂಪ್‌ಗೆ ಇರಾನ್ ವಾರ್ನಿಂಗ್
ಮೃತ ವ್ಯಕ್ತಿ ಟ್ರ‍್ಯಾಕ್ಟರ್‌ನಲ್ಲಿ ಗೋರ್ಕಲ್ ಗ್ರಾಮದಿಂದ ರಾಯಚೂರಿಗೆ ಹತ್ತಿ ಮಾರಲು ಹೊರಟಿದ್ದರು. ಈ ವೇಳೆ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಹಿಂದಿನಿಂದ ಬಂದ ಮರಳು ಲಾರಿ, ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾರ್ಗಮಧ್ಯೆ ಅಪಘಾತದ ಘಟನೆ ಕಂಡು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸ್ಥಳಕ್ಕೆ ಭೇಟಿ ನೀಡಿದರು. ಗಾಯಾಳುವಿಗೆ ಸಾಂತ್ವನ ಹೇಳಿ, ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.ಇದನ್ನೂ ಓದಿ: ಸ್ಟೇಡಿಯಂನ ಬಾತ್ರೂಮ್‌ನಲ್ಲಿ ಅಪ್ರಾಪ್ತ ಹಾಕಿ ಆಟಗಾರ್ತಿಯ ಮೇಲೆ ರೇಪ್, ಬಳಿಕ ಗರ್ಭಪಾತ – ಕೋಚ್ ಅರೆಸ್ಟ್

