ಕಬ್ಬಿನ ಹುಲ್ಲು ಸಾಗಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ – ಧಗ ಧಗ ಹೊತ್ತಿ ಉರಿದ ಟ್ರ್ಯಾಕ್ಟರ್‌

0 Min Read

ಬಾಗಲಕೋಟೆ: ವಿದ್ಯುತ್ ತಂತಿ ತಗುಲಿದ್ದರಿಂದ ಕಬ್ಬಿನ ಹುಲ್ಲು (ರವದಿ) ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ (Tractor) ಧಗ ಧಗ ಹೊತ್ತಿ ಉರಿದ ಘಟನೆ ಜಮಖಂಡಿ ತಾಲ್ಲೂಕಿನ ಟಕ್ಕಳಕಿಯಲ್ಲಿ ನಡೆದಿದೆ.

ವಸಂತ ಚೌಹಾಣ್ ಎಂಬುವರ ಟ್ರ್ಯಾಕ್ಟರ್, ಟ್ರೇಲರ್ ಎಲ್ಲವೂ ಸುಟ್ಟು ಹೋಗಿದೆ. ಬೆಂಕಿ (Fire) ಆರಿಸಲು ಸ್ಥಳೀಯರು ಹರಸಾಹಸ ಪಟ್ಟರೂ ನಿಯಂತ್ರಣ ಮಾಡಲು ಸಾಧ್ಯವಾಗದೇ ನೋಡ ನೋಡುತ್ತಿದ್ದಂತೆ ಸುಟ್ಟುಹೋಗಿದೆ.

ಟಕ್ಕಳಕಿಯಿಂದ ಸಾವಳಗಿ ಕಡೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಎಂಜಿನ್ ಟ್ರೇಲರ್ ಹಾಗೂ ಸೊಪ್ಪು ಸೇರಿ 8-9 ಲಕ್ಷ ರೂ. ನಷ್ಟವಾಗಿರುವ ಸಾಧ್ಯತೆಯಿದೆ. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article