ಫಾರ್ಚೂನರ್ ಬೆಲೆ 2 ಲಕ್ಷ ರೂ. ಇಳಿಕೆ, ಟೊಯೋಟಾದ ಯಾವ ಕಾರಿನ ದರ ಎಷ್ಟು ಕಡಿತವಾಗಿದೆ?

By
2 Min Read

 

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗಿದ್ದೆ ತಡ ಟೊಯೋಟಾ ಕಂಪೆನಿ ತನ್ನ ಕಾರಿನ ಬೆಲೆಯನ್ನು ಭಾರೀ ಇಳಿಸಿದೆ.

ಫಾರ್ಚೂನರ್, ಇನ್ನೊವಾ ಕ್ರಿಸ್ಟಾ, ಕೊರೊಲಾ ಅಲ್ಟಿಸ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗಿದ್ದರೂ ನಗರದಿಂದ ನಗರಕ್ಕೆ ಕಾರುಗಳ ಬೆಲೆಯಲ್ಲಿ ಬದಲಾವಣೆಯಾಗಲಿದೆ

ಬೆಲೆ ಇಳಿಕೆಯಾಗಿದ್ದು ಯಾಕೆ?
ಇಲ್ಲಿಯವರೆಗೆ ವ್ಯಾಟ್, ಮೂಲ ಸೌಕರ್ಯ ತೆರಿಗೆ ಮತ್ತು ಕೆಲ ರಾಜ್ಯಗಳು ವಿಧಿಸುವ ಹಸಿರು ತೆರಿಗೆ ಮತ್ತು ಕಾರಿನ ಶೋ ರೂಂ ಬೆಲೆ ನೋಡಿ ಬೆಲೆಗಳು ನಿಗದಿಯಾಗುತಿತ್ತು. ಜಿಎಸ್‍ಟಿ ವ್ಯವಸ್ಥೆಯಲ್ಲಿ ಕಾರುಗಳ ಮೇಲೆ ಶೇ. 28ರಷ್ಟು ತೆರಿಗೆ ಜತೆಗೆ ಆಯಾ ಕಾರುಗಳ ಗಾತ್ರಕ್ಕೆ ತಕ್ಕಂತೆ ಶೇ. 1ರಿಂದ ಶೇ 15ರವರೆಗೆ ಸೆಸ್ ವಿಧಿಸಲಾಗುತ್ತದೆ.

ಜಿಎಸ್‍ಟಿಯಲ್ಲಿ ಸಣ್ಣ ಕಾರುಗಳಿಗೆ ನಿಗದಿಯಾದ ಅತ್ಯಧಿಕ ದರ ಶೇ.28 ಜೊತೆಗೆ ಹೆಚ್ಚುವರಿಯಾಗಿ ಶೇ.1ರಷ್ಟು ಸೆಸ್ ವಿಧಿಸಲಾಗುತ್ತದೆ. ಮಧ್ಯಮ ಗಾತ್ರದ ಕಾರುಗಳು ಜಿಎಸ್‍ಟಿ ದರವಲ್ಲದೆ ಶೇ.3ರಷ್ಟು ಹಾಗೂ ಲಕ್ಸುರಿ ಕಾರುಗಳು ಶೇ.15ರಷ್ಟು ಸೆಸ್ ವಿಧಿಸಲಾಗುತ್ತದೆ. ಈ ಹಿಂದೆ ಸ್ಟೋರ್ಟ್ಸ್  ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಮೇಲೆ ಶೇ.48ರಷ್ಟು ತೆರಿಗೆ ವಿಧಿಸಲಾಗುತಿತ್ತು. ಆದರೆ ಈಗ ಜಿಎಸ್‍ಟಿಯಲ್ಲಿ ಶೇ.43 ರಷ್ಟು ಹಾಕಲಾಗುತ್ತದೆ.

ಸಣ್ಣ ಕಾರುಗಳ ಮೇಲೆ ಈ ಹಿಂದೆಯೂ ಶೇ.29ರಷ್ಟು ತೆರಿಗೆ ಇತ್ತು. ಹೀಗಾಗಿ ಹೊಸ ತೆರಿಗೆ ಈ ದರ ಹಾಗೆಯೇ (ಶೇ. 28 ಜಿಎಸ್‍ಟಿ + ಶೇ.1 ಸೆಸ್) ಇರಲಿರುವ ಕಾರಣ ಸಣ್ಣ ಕಾರುಗಳ ಮೇಲೆ ಜಿಎಸ್‍ಟಿಯಿಂದ ಅಷ್ಟೊಂದು ಪರಿಣಾಮ ಬೀರದ ಕಾರಣ ಬೆಲೆ ಕಡಿಮೆಯಾಗುವುದಿಲ್ಲ.

ಫಾರ್ಚೂನರ್


26.66 ಲಕ್ಷ ರೂ. ನಿಂದ ಆರಂಭವಾಗುವ ಫಾರ್ಚೂನರ್ ಕಾರಿನ ಬೆಲೆ 2,17,000 ರೂ. ಇಳಿಕೆಯಾಗಿದೆ

ಇನ್ನೋವಾ ಕ್ರಿಸ್ಟಾ


14 ಲಕ್ಷ ರೂ.ನಿಂದ ಆರಂಭವಾಗುವ ಇನ್ನೋವಾ ಕ್ರಿಸ್ಟಾ ಬೆಲೆಯಲ್ಲಿ 98,500 ರೂ. ಇಳಿಕೆಯಾಗಿದೆ.

ಕೊರೊಲಾ ಅಲ್ಟಿಸ್


ಕೊರೊಲಾ ಅಲ್ಟಿಸ್ ಬೆಲೆ 92,500 ರೂ. ಇಳಿಕೆಯಾಗಿದ್ದು, ದೆಹಲಿ ಶೋರೂಂನಲ್ಲಿ ಈ ಕಾರಿಗೆ 15.88 ಲಕ್ಷ ರೂ. ಬೆಲೆಯಿದೆ.

ಇಟಿಯೋಸ್ ಸೆಡಾನ್


6.94 ಲಕ್ಷ ರೂ.ನಿಂದ ಆರಂಭವಾಗುವ ಇಟಿಯೋಸ್ ಸೆಡಾನ್ ಬೆಲೆ 24,500 ರೂ. ಇಳಿಕೆಯಾಗಿದೆ.

ಇಟಿಯೋಸ್ ಲಿವಾ


5.69 ಲಕ್ಷ ರೂ. ನಿಂದ ಆರಂಭವಾಗುವ ಇಟಿಯೋಸ್ ಲಿವಾ ಬೆಲೆ 10,500 ರೂ. ಇಳಿಕೆಯಾಗಿದೆ.

ಇದನ್ನೂ ಓದಿ:ಜಿಎಸ್‍ಟಿ ಇಫೆಕ್ಟ್: ಬಜಾಜ್ ಬೈಕ್ ಗಳ ಬೆಲೆ ಇಳಿಕೆ

Share This Article
Leave a Comment

Leave a Reply

Your email address will not be published. Required fields are marked *