ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ಚಿತ್ರ `ಟಾಕ್ಸಿಕ್’ ಚಿತ್ರದ ಟೀಸರ್ (Toxic Teaser) ರಿಲೀಸ್ ಆಗಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಟೀಸರ್‌ನಲ್ಲಿ ಇಣುಕಿದೆ. ಯಶ್ ಇಲ್ಲಿ ಬೋಲ್ಡ್ ಆ್ಯಂಡ್ ಮಾಸ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ.
2 ನಿಮಿಷ 45 ಸೆಕೆಂಡುಗಳ ಟೀಸರ್‌ನಲ್ಲಿ ಯಶ್ ಒಂದೇ ಒಂದು ಡೈಲಾಗ್ ಹೊಡೆಯುತ್ತಾರೆ. `ಡ್ಯಾಡಿ ಈಸ್ ಹೋಮ್’ ಅನ್ನೋ ಡೈಲಾಗ್ ಬಿಡುವ ಯಶ್ ಭುಜದ ಮೇಲೆ ಡಿಫರೆಂಟ್ ರೈಫಲ್ ಹಿಡಿದು ಬ್ಲ್ಯಾಕ್ & ಬ್ಲ್ಯಾಕ್ ಲುಕ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ರಾಯ ಪಾತ್ರದಲ್ಲಿ ಕಾಣಿಸ್ಕೊಂಡಿದ್ದು ಈಗ ಆ ಪಾತ್ರದ ಪರಿಚಯ ಆಗಿದೆ. ಇದನ್ನೂ ಓದಿ: ಅಮೆರಿಕದ ಉತ್ಪನ್ನಗಳನ್ನು ಮಾತ್ರ ವೆನೆಜುವೆಲಾ ಖರೀದಿಸಬೇಕು: ಟ್ರಂಪ್ ಕಟ್ಟಪ್ಪಣೆ
ಸ್ಮಶಾನದ ದೃಶ್ಯಗಳಿಂದಲೇ ಟೀಸರ್ ತೆರೆದುಕೊಳ್ಳುತ್ತದೆ. ಒಂದಷ್ಟು ಗಲಾಟೆ, ಗದ್ದಲ ಮುಗಿದ ನಂತರ ಅಸಲಿ ಗೇಮ್ ಶುರುವಾಗುತ್ತೆ. ಯಶ್ ಶರ್ಟ್ಲೆಸ್ ಆಗಿ ಕಾಣಿಸಿಕೊಳ್ತಾರೆ. ಯಶ್ ಬ್ಯಾಕ್ ಲುಕ್ನಿಂದ ಶುರುವಾಗೋ ದೃಶ್ಯ ಬೂಟುಗಾಲಿಂದ ಬುಲೆಟ್ಸ್ ಬಿಡುತ್ತಾ ಮೈನವಿರೇಳುವಂತೆ ಮಾಡುತ್ತಾರೆ.
ಪ್ಯೂರ್ ಹಾಲಿವುಡ್ ಸ್ಟೈಲ್‌ನಲ್ಲಿ ಮೂಡಿಬಂದಿರುವ ʻಟಾಕ್ಸಿಕ್ʼ ಚಿತ್ರದ ಟೀಸರ್ ಕನ್ನಡದಲ್ಲಿ ತಯಾರಾದ ಪ್ಯಾನ್‌ವರ್ಲ್ಡ್ ಸಿನಿಮಾ ಅಂತಲೇ ಕರೆಸಿಕೊಳ್ತಿದೆ. ಯಶ್ ನಟಿಸಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಕನ್ನಡದ ಕೆವಿಎನ್ ಫಿಲಂಸ್ ಕೂಡ ಯಶ್ ಜೊತೆ ಕೈ ಜೋಡಿಸಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಹಾಗೂ ವಿಶ್ವದ ಬಿಗ್ ಸ್ಟಾರ್ಸ್ ಈ ಚಿತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾನಿ, ಹುಮಾ ಖುರೇಶಿ, ತಾರಾ ಸುತಾರಿಯಾ ತಾರಾಗಣದಲ್ಲಿದ್ದಾರೆ. ಇದೇ ಮಾರ್ಚ್ 19ಕ್ಕೆ ಚಿತ್ರ ವರ್ಲ್ಡ್‌ವೈಡ್ ರಿಲೀಸ್ ಆಗ್ತಿದೆ.
ಸದ್ಯ ಟಾಕ್ಸಿಕ್ ಕೆಲಸಗಳಲ್ಲಿ ಬ್ಯುಸಿ ಇರುವ ಯಶ್ ಈ ಬಾರಿ ವೈಯಕ್ತಿಕವಾಗಿ ಅಭಿಮಾನಿಗಳನ್ನ ಭೇಟಿಯಾಗುತ್ತಿಲ್ಲ. ಅಂದಹಾಗೆ ಇದೀಗ ರಿಲೀಸ್ ಆಗಿರುವ ಟೀಸರ್ ಸ್ಯಾಂಡಲ್‌ವುಡ್ ಸಿನಿಮಾಗಳ ಸಿದ್ಧಸೂತ್ರವನ್ನ ಬ್ರೇಕ್ ಮಾಡಿದೆ ಅನ್ನೋದಂತು ಸ್ಪಷ್ಟ. ಇದನ್ನೂ ಓದಿ: PUBLiC TV Exclusive | ಕೋಗಿಲು ಲೇಔಟ್ ನಿರಾಶ್ರಿತರ ಲಿಸ್ಟ್ ಔಟ್; 76 ಕುಟುಂಬಗಳಿರೋದು 6 ತಿಂಗಳಿಂದಷ್ಟೇ


