ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವೆಹಿಕಲ್‌ಗಳ ಕಾರ್ಯಾರಂಭ

Public TV
1 Min Read

– ಆದ್ಯತೆ ಮೇರೆಗೆ ಮೆಜೆಸ್ಟಿಕ್‌ ಸುತ್ತಮುತ್ತ ಟೋಯಿಂಗ್‌ಗೆ ಅನುಮತಿ

ಬೆಂಗಳೂರು: ಕೋವಿಡ್ ಕಾಲದಲ್ಲಿ ನಿಂತಿದ್ದ ಟೋಯಿಂಗ್ (Towing) ಇದೀಗ ಬೆಂಗಳೂರಲ್ಲಿ (Bengaluru) ಪುನರಾರಂಭವಾಗಿದೆ. ಟೋಯಿಂಗ್ ಸಿಬ್ಬಂದಿಗಳ ಮೇಲೆ ಸಾಲು ಸಾಲು ಆರೋಪಗಳು ಬಂದ ಹಿನ್ನೆಲೆ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಇದೀಗ ಮೆಜೆಸ್ಟಿಕ್ (Mejestic) ಏರಿಯಾದಲ್ಲಿ ಮತ್ತೆ ಟೋಯಿಂಗ್ ಕಾರ್ಯಾರಂಭವಾಗಿದೆ.

ಅದು ಕೋವಿಡ್ ಕಾಲ. ಬೆಂಗಳೂರಲ್ಲಿ ಟೋಯಿಂಗ್ ಸಿಬ್ಬಂದಿ ವಾಹನ ಸವಾರರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ನೋ ಪಾರ್ಕಿಂಗ್‌ನಲ್ಲಿರುವ ವೆಹಿಕಲ್‌ಗಳನ್ನು ಟೋ ಮಾಡುವ ಮೊದಲು ಅನೌನ್ಸ್ ಮಾಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳು ಬಂದ ಹಿನ್ನೆಲೆ ಟೋಯಿಂಗ್ ಸಂಪೂರ್ಣವಾಗಿ ಸ್ಟಾಪ್ ಮಾಡಿಸಲಾಗಿತ್ತು. ಇದೀಗ ಮತ್ತೆ ಮೂರ್ನಾಲ್ಕು ವರ್ಷಗಳ ಬಳಿಕ ಟೋಯಿಂಗ್ ಆರಂಭವಾಗಿದೆ. ಇದನ್ನೂ ಓದಿ: ಮೆಡಿಕಲ್ ಸೀಟ್ ಸಿಗದೇ ಮನನೊಂದು ಯುವತಿ ಆತ್ಮಹತ್ಯೆ

ಆದ್ಯತೆ ಮೇರೆಗೆ ಮೆಜೆಸ್ಟಿಕ್‌ನಲ್ಲಿ ಎರಡು ಟೋಯಿಂಗ್ ವಾಹನಗಳು ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ. ಮೆಜೆಸ್ಟಿಕ್‌ನ ಜನಸಂದಣಿ ಪ್ರದೇಶದಲ್ಲಿ ನೋ ಪಾರ್ಕಿಂಗ್‌ನಲ್ಲಿರೋ ವೆಹಿಕಲ್‌ಗಳನ್ನು ಉಪ್ಪಾರಪೇಟೆ ಸಂಚಾರ ಪೊಲೀಸರು ಟೋ ಮಾಡುತ್ತಿದ್ದಾರೆ. ಟೋಯಿಂಗ್ ಮಾಡುವ ಮುನ್ನ 5 ನಿಮಿಷಗಳ ಕಾಲ ಅನೌನ್ಸ್ ಮಾಡುತ್ತಿದ್ದು, ಐದು ನಿಮಿಷಗಳ ಒಳಗಾಗಿ ವಾಹನ ತೆಗೆಯದಿದ್ದರೆ ಟೋಯಿಂಗ್ ಮಾಡಲಾಗುತ್ತಿದೆ. ಬಿಬಿಎಂಪಿ ವೆಹಿಕಲ್‌ಗಳನ್ನು ನೀಡಿರೋ ಹಿನ್ನೆಲೆ ಟೋಯಿಂಗ್ ಚಾರ್ಜ್ ಹಾಕದೆ ಕೇವಲ ನೋ ಪಾರ್ಕಿಂಗ್ ಫೈನ್ 1,000 ರೂ. ಹಾಕಲಾಗುತ್ತಿದೆ. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

ಹಂತ ಹಂತವಾಗಿ ಬೆಂಗಳೂರಿನಾದ್ಯಂತ ಟೋಯಿಂಗ್ ವೆಹಿಕಲ್‌ಗಳು ತಮ್ಮ ಕೆಲಸ ಆರಂಭಿಸಬಹುದು. ಅನೌನ್ಸ್ ಮೆಂಟ್ ರೂಲ್ಸ್ ಏನಿದೆಯೋ ಅದನ್ನು ಪೊಲೀಸರು ಫಾಲೋ ಮಾಡಬೇಕು. ಇನ್ನು ನೋ ಪಾರ್ಕಿಂಗ್‌ನಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡುವ ಸವಾರರು 1,000 ರೂ ಹೆಚ್ಚುವರಿಯಾಗಿ ಇಟ್ಟುಕೊಂಡಿರಿ. ಇಲ್ಲ ಪಾರ್ಕಿಂಗ್ ಜಾಗದಲ್ಲೇ ವೆಹಿಕಲ್ ಪಾರ್ಕಿಂಗ್ ಮಾಡಿ. ಇದನ್ನೂ ಓದಿ: 

Share This Article