ಹನೋಯಿ: ವಿಯೆಟ್ನಾಂನಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ 34 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 8ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಿಂದಾಗಿ ಹಾ ಲಾಂಗ್ ಕೊಲ್ಲಿ ಪ್ರವಾಸಿ ತಾಣದಲ್ಲಿ ದುರ್ಘಟನೆ ನಡೆದಿದೆ.
ಪ್ರವಾಸಿ ದೋಣಿಯಲ್ಲಿ 48 ಮಂದಿ ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿ ಇದ್ದರು. ಅವರೆಲ್ಲರೂ ವಿಯೆಟ್ನಾಮ್‌ನವರೇ ಎಂದು ವದರಿಗಳು ತಿಳಿಸಿವೆ. ವಿಷಯ ತಿಳಿದ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, 11 ಜನರನ್ನ ರಕ್ಷಣೆ ಮಾಡಿದ್ದಾರೆ.