ಈ ವಾರ ಕಾಂತಾರ ಜೊತೆ ತೋತಾಪುರಿ ರುಚಿ: ಮಣಿರತ್ನಂ ಸಿನಿಮಾನೂ ರಿಲೀಸ್

Public TV
2 Min Read

ನಿರೀಕ್ಷೆ ಮೂಡಿಸಿರುವಂತಹ ನಾಲ್ಕು ಚಿತ್ರಗಳು ನಾಳೆ ಕರ್ನಾಟಕದಲ್ಲಿ ರಿಲೀಸ್ ಆಗುತ್ತಿವೆ. ಈ ನಾಲ್ಕು ಸಿನಿಮಾಗಳಲ್ಲಿ ಮೂರು ಚಿತ್ರಗಳು ತಮ್ಮದೇ ಆದ ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿವೆ. ದಸರಾ ಹಬ್ಬದ ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಪ್ರೇಕ್ಷಕರು ಯಾವೆಲ್ಲ ಸಿನಿಮಾಗಳನ್ನು ನೋಡಲಿದ್ದಾರೆ ಮತ್ತು ಬಾಕ್ಸ್ ಆಫೀಸಿನಲ್ಲಿ ಯಾವ ಚಿತ್ರಗಳು ಗೆಲ್ಲುತ್ತವೆ ಎನ್ನುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

ಮೇಕಿಂಗ್ ವಿಡಿಯೋ ಮತ್ತು ಕಥೆಯ ಕಾರಣದಿಂದಾಗಿ ರಿಷಭ್ ಶೆಟ್ಟಿ ನಟಿಸಿ, (Rishabh Shetty) ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ನೂರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಮಂಗಳೂರು ನೆಲದ ದೇಸಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದಾರಂತೆ ರಿಷಭ್. ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನು ಸೂಕ್ಷ್ಮವಾಗಿ ಈ ಸಿನಿಮಾದಲ್ಲಿ ಹೇಳುತ್ತಿದ್ದು, ಕಿಶೋರ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬಂದಿದೆ.

ಭಾವೈಕ್ಯತೆಯ ಸಂದೇಶ ಸಾರುವ  ಕಥಾಹಂದರ ಇರುವ ಚಿತ್ರ ತೋತಾಪುರಿ (Totapuri) ಈವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನವರಸನಾಯಕ ಜಗ್ಗೇಶ್ (Jaggesh) ಹಾಗೂ ಅದಿತಿ ಪ್ರಭುದೇವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿಜಯ್‌ ಪ್ರಸಾದ್ ಅವರ ನಿರ್ದೇಶನವಿದೆ.  ಕಾನ್‌ಸ್ಟಿಟ್ಯೂಷನ್ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ  ಅಣ್ಣ ತಮ್ಮಂದಿರು ಎಂಬ ಅದ್ಭುತವಾದ ಸಂದೇಶ ಇರುವ ತೋತಾಪುರಿಯಲ್ಲಿ  ಉಪ್ಪು, ಹುಳಿ, ಖಾರ ಎಲ್ಲದರ ಸಮನಾದ ಮಿಶ್ರಣವಿದೆ ಚಿತ್ರದಲ್ಲಿ ಒಬ್ಬ ಮುಸ್ಲಿಂ ಯುವತಿಯಾಗಿ ನಾಯಕಿ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾಸುಂದರ್, ಹೇಮಾದತ್, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು  ನಟಿಸಿದ್ದಾರೆ.

ಮಣಿರತ್ನಂ  (Mani Ratnam) ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊನ್ನಿಯಿನ್ ಸೆಲ್ವನ್ (Ponniyin Selvan) ಕೂಡ ನಾಳೆ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಮತ್ತು ಕನ್ನಡ ಮೂರು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಇದೊಂದು ಭಾರೀ ಬಜೆಟ್ ಸಿನಿಮಾ ಕೂಡ ಆಗಿದೆ. ಇದೊಂದು ಕಾದಂಬರಿ ಆಧರಿಸಿದ ಸಿನಿಮಾವಾಗಿದ್ದು, 1955 ಚೋಳರ ಆಳ್ವಿಕೆಯ ಸುತ್ತ ಹೆಣೆದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ನೈಜ ಘಟನೆಯ ಜೊತೆಗೆ ಫ್ಯಾಂಟಸಿ ಕೂಡ ಮಿಕ್ಸ್ ಆಗಿರುವುದು ಸಿನಿಮಾದ ವಿಶೇಷಗಳಲ್ಲಿ ಒಂದು. ವಿಕ್ರಮ್, ಐಶ್ವರ್ಯ ರೈ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.

ಈ ಸಿನಿಮಾಗಳ ಜೊತೆಗೆ ವಿಕ್ರಮ್ ವೇದ (Vikram Veda) ಕೂಡ ನಾಳೆಯೇ ಬಿಡುಗಡೆ ಆಗುತ್ತಿದೆ. ಹೀಗಾಗಿ ಸಹಜವಾಗಿಯೇ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಬಹುತೇಕ ಚಿತ್ರಗಳು ನಿರೀಕ್ಷೆ ಮೂಡಿಸಿರುವುದರಿಂದ ಯಾರೆಲ್ಲ ಯಾವ ಸಿನಿಮಾಗಳನ್ನು ನೋಡಲಿದ್ದಾರೆ ಮತ್ತು ಬಾಕ್ಸ್ ಆಫೀಸಿನಲ್ಲಿ ಯಾವ ಚಿತ್ರಗಳಿಗೆ ಗೆಲುವು ಸಿಗಲಿದೆ ಎಂದು ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *