Bengaluru | ಮೋಟಾರ್‌ನಿಂದ ಮಳೆ ನೀರು ತೆರವು ಮಾಡಲು ಹೋಗಿ ಕರೆಂಟ್‌ ಶಾಕ್‌ – 12ರ ಬಾಲಕ ಸೇರಿ ಇಬ್ಬರು ಬಲಿ

Public TV
1 Min Read

– ಬೆಂಗಳೂರಲ್ಲಿ ಮಹಾಮಳೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆ

ಬೆಂಗಳೂರು: ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‌ನಲ್ಲಿ ಮೋಟಾರ್‌ನಿಂದ ಮಳೆಯ ನೀರು ಮಾಡಲು ಹೋಗಿ ಎಲೆಕ್ಟ್ರಿಕ್‌ ಶಾಕ್‌ ತಗುಲಿ 9 ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ. ಇದರೊಂದಿಗೆ ಮಹಾ ಮಳೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಘಟನೆಯಲ್ಲಿ ಮನಮೋಹನ್ ಕಾಮತ್ (63), ದಿನೇಶ್ (12) ಮೃತ ದುರ್ದೈವಿಗಳು. ಇವರು ಬಿಟಿಎಂ 2ನೇ ಹಂತದಲ್ಲಿರುವ ಎನ್‌.ಎಸ್ ಪಾಳ್ಯದಲ್ಲಿರುವ ಮಧುವನ ಅಪಾರ್ಟ್ಮೆಂರ್ಟ್‌ಮೆಂಟ್‌ ನಿವಾಸಿಗಳು. ಇದನ್ನೂ ಓದಿ: ವಾಮಾಚಾರ ಮಾಡುತ್ತಿರುವುದಾಗಿ ಶಂಕಿಸಿ ಮಹಿಳೆಯ ಹತ್ಯೆ – 23 ಜನರಿಗೆ ಜೀವಾವಧಿ ಶಿಕ್ಷೆ

ಇಂದು ಸಂಜೆ 6:15 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‌ನಲ್ಲಿ ನಿಂತಿದ್ದ ನೀರನ್ನು ಮೋಟಾರ್‌ ಮೂಲಕ ಹೊರಹಾಕಲು ಮುಂದಾಗಿದ್ದರು. ಹೊರಗಡೆಯಿಂದ ಮೋಟಾರ್‌ ತಂದು ಸ್ವಿಚ್‌ಗೆ ಕನೆಕ್ಷನ್ ನೀಡಿ ನೀರನ್ನು ಹೊರ ತೆಗೆಯುವಾಗ ಶಾರ್ಟ್ ಸರ್ಕ್ಯೂಟ್‌ನಿಂದ ಕರೆಂಟ್ ತಗುಲಿ ಮನಮೋಹನ್ ಕಾಮತ್ ಮೃತಪಟ್ಟಿದ್ದಾರೆ. ಇದರೊಂದಿಗೆ ಅದೇ ಅಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಭರತ್ ಎಂಬವರ ಮಗ ದಿನೇಶ್‌ಗೂ ಕರೆಂಟ್‌ ಶಾಕ್‌ ತಗುಲಿ ಮೃತಪಟ್ಟಿದ್ದಾನೆ.

ಇದಕ್ಕೂ ಮುನ್ನ ವೈಟ್ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದ ಶಶಿಕಲಾ (35) ಎಂಬ ಮಹಿಳೆ ಕಾಂಪೌಂಡ್ ಕುಸಿದು ಸಾವನ್ನಪ್ಪಿದ್ದರು. ಇದನ್ನೂ ಓದಿ: ಹೆಬ್ಬಾಳ್ಕರ್‌ ವಿರುದ್ಧ ಅವಹೇಳಕಾರಿ ಪದ ಬಳಕೆ ಪ್ರಕರಣ – ಸಿ.ಟಿ ರವಿ ವಿರುದ್ಧ ವಿಚಾರಣೆಗೆ ಸುಪ್ರೀಂ ತಡೆ

Share This Article