ಮಂಗಳೂರು ಬಂದರಿನಲ್ಲಿ ಸುಂಟರಗಾಳಿ – ಆಕಾಶದೆತ್ತರೆಕ್ಕೆ ಕಪ್ಪು ಮಿಶ್ರಿತ ಗಾಳಿ

0 Min Read

ಮಂಗಳೂರು: ನವ ಮಂಗಳೂರು ಬಂದರು (New Mangalore Port) ಒಳಗಡೆ ಇಂದು ಸುಂಟರ ಗಾಳಿ(Tornado) ಕಾಣಿಸಿಕೊಂಡಿದೆ.

ಪಣಂಬೂರುನಲ್ಲಿರುವ ನವ ಮಂಗಳೂರು ಬಂದರಿನಲ್ಲಿ ಕಲ್ಲಿದ್ದಲು ರಾಶಿ ಹಾಕಿರುವ‌ ಸ್ಥಳದಲ್ಲಿ ಭಾರೀ ಸುಂಟರಗಾಳಿ ಎದ್ದಿತ್ತು. ಇದನ್ನೂ ಓದಿ: ಅಮೆರಿಕದ 2800 ಕೋಟಿ ಮೌಲ್ಯದ ʼಆಕಾಶದ ಕಣ್ಣʼನ್ನೇ ಕಿತ್ತ ಇರಾನ್‌ – ವಿಮಾನ 2 ಹೋಳು

ಕಪ್ಪು ಮಿಶ್ರಿತ ಮಣ್ಣಿನೊಂದಿಗೆ ನೆಲದಿಂದ ಆಕಾಶದೆತ್ತರಕ್ಕೆ ಸುಂಟರಗಾಳಿ ಹೋಗಿತ್ತು. ಬುಗುರಿ ತಿರುಗಿದಂತೆ ತಿರುಗಿದ ಸುಂಟರಗಾಳಿಯ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Share This Article