ದೇಶದಲ್ಲೇ ಫಸ್ಟ್ ಟೈಂ – ಸುಪ್ರೀಂನಲ್ಲಿ ಎಲ್ಲವೂ ಸರಿಯಿಲ್ಲ ಎಂದ ನಾಲ್ವರು ಜಡ್ಜ್ ಗಳು

Public TV
2 Min Read

ನವದೆಹಲಿ: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿ, ನ್ಯಾಯಾಂಗ ವ್ಯವಸ್ಥೆಯ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ.

ನ್ಯಾಯಮೂರ್ತಿಗಳು ಪ್ರತಿಕಾಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರ ಜೊತೆ ಮಾತುಕತೆ ನಡೆಸಿ ವಿವರ ನೀಡುವಂತೆ ಕೇಳಿದ್ದಾರೆ.

ಸುಪ್ರೀಂ ಕೋರ್ಟ್ ನ ನ್ಯಾಯಾಮೂರ್ತಿಗಳಾದ ಚಲಮೇಶ್ವರ್, ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಒಂದು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದ ಪತ್ರ ಸಾರಾಂಶವನ್ನು ಬಹಿರಂಗ ಪಡಿಸಿದ್ದಾರೆ. ಪತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯದ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ನಾಲ್ವರು ನ್ಯಾಯಮೂರ್ತಿಗಳು ಪತ್ರಕ್ಕೆ ಸಹಿ ಮಾಡಿದ್ದಾರೆ.

ನ್ಯಾ. ಚಲಮೇಶ್ವರ್ ಮಾತನಾಡಿ, ನಾವು ಭಾರತ ಮುಖ್ಯ ನ್ಯಾಯಮೂರ್ತಿ (ಸಿಐಜೆ)ಗಳಿಗೆ ಪತ್ರ ಬರೆದಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಸ್ವಾತಂತ್ರ್ಯದ ಕುರಿತು ನಮ್ಮ ಕಾಳಜಿಯನ್ನು ತಿಳಿಸಿದ್ದೇವು, ಆದರೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡಲು ವಿಫಲವಾಗಿದ್ದೇವೆ. ನ್ಯಾಯಾಂಗ ವ್ಯವಸ್ಥೆಯು ನಿಸ್ಪಕ್ಷಪಾತವಿಲ್ಲದೇ ಇದ್ದರೆ ಪ್ರಜಾಪ್ರಭುತ್ವ ಬದುಕುಳಿಯಲು ಸಾಧ್ಯವಿಲ್ಲ. ಅದ್ದರಿಂದ ಅನಿವಾರ್ಯವಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಸಿಐಜೆ ಬರೆದ ಪತ್ರದಲ್ಲಿ ನ್ಯಾಯಾಲಯದ ಆಡಳಿತದಲ್ಲಿ ಕೆಲವು ಬಯಸದ ಘಟನೆ ನಡೆಸಯುತ್ತಿರುವ ಕುರಿತು ಮಾಹಿತಿ ನೀಡಿದ್ದೇವು, ಆದರೆ ಸಿಐಜೆ ಗೆ ಬರೆದ ಪತ್ರದಿಂದ ಯಾವುದೇ ಪ್ರಯೋಜನ ಉಂಟಾಗಿಲ್ಲ ಈ ಪತ್ರದಲ್ಲಿ ದೇಶದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ವಿಚಾರದ ಬಗ್ಗೆ ಅಸಮಾಧಾನಗೊಂಡಿರುವ ಕುರಿತು ಮಾಹಿತಿ ನೀಡಲಾಗಿದೆ.

ಜಡ್ಜ್ ಗಳ ಆರೋಪ ಏನು?
ಸುಪ್ರೀಂ ಕೋರ್ಟಿನ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ಕಳೆದ ಕೆಲವು ತಿಂಗಳಲ್ಲಿ ನಡೆದ ಹಲವು ಸಂಗತಿಗಳು ಅಪೇಕ್ಷಣೀಯ ಮಟ್ಟಕ್ಕಿಂತ ಕೆಳಗಿವೆ. ದೇಶದ ಋಣವನ್ನು ನಾವು ಪಾವತಿಸಬೇಕಿದೆ. ಅದಕ್ಕಾಗಿಯೇ ನಾವು ಇಲ್ಲಿದ್ದೇವೆ. ಸುಪ್ರೀಂಕೋರ್ಟಿಗೆ ಹಾಗೂ ದೇಶಕ್ಕೆ ನಾವು ಸಲ್ಲಿಸಬೇಕಾದ ಹೊಣೆಗಾರಿಕೆಯಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಇಷ್ಟಾದರೂ ಮಾಡಲೇಬೇಕೆಂಬುದು ನಾಲ್ಕು ಮಂದಿಗೆ ಮನವರಿಕೆಯಾಗಿದೆ.

ನಿಷ್ಪಕ್ಷಪಾತ ನ್ಯಾಯಾಧೀಶ ಮತ್ತು ನ್ಯಾಯಾಂಗದ ಅಗತ್ಯವಿದೆ. ಮುಖ್ಯ ನ್ಯಾಯಮೂರ್ತಿಯವರನ್ನು ಮಹಾಭಿಯೋಗಕ್ಕೆ ಒಳಪಡಿಸುವ ಬಗ್ಗೆ ದೇಶವೇ ನಿರ್ಧರಿಸಲಿ. ಸುಪ್ರೀಂ ಕೋರ್ಟಿನ ಆಡಳಿತದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ. ಅದನ್ನು ಸರಿಪಡಿಸಿ ಎಂದು ನಾವು ಒಟ್ಟಾಗಿ ಸಿಜೆಐ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿ ವಿಫಲರಾದೆವು. ಸುಪ್ರೀಂ ಕೋರ್ಟ್ ಒಳಗೆ ಹಲವಾರು ಅಕ್ರಮಗಳು ನಡೆಯುತ್ತಿವೆ. ಮುಖ್ಯ ನ್ಯಾಯಮೂರ್ತಿಗಳು ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಕೋರಿಕೆಗಳಿಗೆ ಉತ್ತರದಾಯಿತ್ವ ಪ್ರದರ್ಶಿಸುತ್ತಿಲ್ಲ. ನ್ಯಾಯಾಂಗ ಹಾಗೂ ಪ್ರಜಾಸತ್ತೆಯ ಉಳಿವಿಗಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂಬ ಆರೋಪ ಮುಕ್ತಕ್ಕೆ ಈ ಸುದ್ದಿಗೋಷ್ಠಿ. ಕೊಲೀಜಿಯಂ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಲು ಈ ಸುದ್ದಿಗೋಷ್ಠಿ ನಡೆಸುತ್ತಿದ್ದು ನಮಗೆ ಬೇರೆ ಆಯ್ಕೆಯೇ ಉಳಿದಿಲ್ಲ. ಸಿಜಿಐ ನಮಗೆ ಬೇರೆ ಅವಕಾಶವನ್ನೇ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *