ಟೆಹ್ರಾನ್: ಇಸ್ರೇಲ್ (Israel) ಮತ್ತು ಅಮೆರಿಕಕ್ಕೆ (USA) ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇರಾನಿನ ಟಾಪ್ ಕಮಾಂಡರ್ ಏರ್‌ಸ್ಟ್ರೈಕ್‌ಗೆ ಬಲಿಯಾಗಿದ್ದಾರೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ವಕ್ತಾರ ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ(Ali Mohammad Naini) ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಅಮೆರಿಕ-ಜಿಯೋನಿಸ್ಟ್ ನಡೆಸಿದ ಕ್ರಿಮಿನಲ್, ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಐಆರ್‌ಜಿಸಿ ಹೇಳಿದೆ.
ಸಾವಿಗೆ ಮುನ್ನ ತನ್ನ ಕೊನೆಯ ಹೇಳಿಕೆಯಲ್ಲಿ ಇರಾನ್ ಇನ್ನು ಮುಂದೆ ಯುರೇನಿಯಂ ಸಂವರ್ಧನೆಗೊಳಿಸಲು ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸಲು ಸಾಧ್ಯವಿಲ್ಲ ಎಂಬ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆಯನ್ನು ಬಹಿರಂಗವಾಗಿ ವ್ಯಂಗ್ಯವಾಡಿದ್ದರು. ಯುದ್ಧದ ಹೊರತಾಗಿಯೂ ಇರಾನಿನ ಕ್ಷಿಪಣಿ ಉದ್ಯಮವು ಅದರ ‘ಅತ್ಯುನ್ನತ ಮಟ್ಟವನ್ನು’ ತಲುಪಿದೆ ಎಂದು ಅವರು ಹೇಳಿದ್ದರು.
🔴ELIMINATED: Ali Mohammad Naini, the Spokesperson and Head of the Public Relations Array of the IRGC.
Naini served in several propaganda and public relations roles. In his role as the IRGC’s main propagandist for the past 2 years, he disseminated the regime’s terrorist… pic.twitter.com/e29Elb16FS
— Israel Defense Forces (@IDF) March 20, 2026
ನಮ್ಮ ಕ್ಷಿಪಣಿ ಉದ್ಯಮವು ಪರಿಪೂರ್ಣವಾಗಿದ್ದು ಇದರಲ್ಲಿ ಯಾವುದೇ ಕಾಳಜಿ ಇಲ್ಲ. ಯುದ್ಧಕಾಲದ ಪರಿಸ್ಥಿತಿಗಳಲ್ಲಿಯೂ ನಾವು ಕ್ಷಿಪಣಿ ಉತ್ಪಾದನೆಯನ್ನು ಮುಂದುವರಿಸುತ್ತೇವೆ. ಕ್ಷಿಪಣಿ ಉದ್ಯಮವು ಅತ್ಯುನ್ನತ ಮಟ್ಟವನ್ನು ತಲುಪಿದೆ. ಶತ್ರುಗಳು ಈಗ ಆಶ್ಚರ್ಯಗೊಂಡಿದ್ದು ಯುದ್ಧಗಳು ಮುಂದುವರೆದಂತೆ ಮತ್ತಷ್ಟು ತೀವ್ರ ದಾಳಿ ನಡೆಯಲಿದೆ ಎಂದು ನೈನಿ ಎಚ್ಚರಿಕೆ ನೀಡಿದ್ದರು.
ಇರಾನ್ ನೌಕಾಪಡೆ ಸಂಪೂರ್ಣ ನಾಶವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ನಾಶವಾಗಿದೆ ಎಂದು ಹೇಳಿದರುವ ಟ್ರಂಪ್‌ಗೆ ಧೈರ್ಯವಿದ್ದರೆ ಅಮೆರಿಕದ ಹಡಗುಗಳನ್ನು ಪರ್ಷಿಯನ್ ಕೊಲ್ಲಿಗೆ ಕಳುಹಿಸಲಿ ಎಂದು ಸವಾಲು ಎಸೆದಿದ್ದರು.
ಇರಾನಿನ ಸುದ್ದಿ ಮಾಧ್ಯಮ ಮೊಹಮ್ಮದ್ ನೈನಿ ಸಂದೇಶವನ್ನು ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ ಐಆರ್‌ಜಿಸಿ ಇಸ್ರೇಲ್- ಅಮೆರಿಕದ ದಾಳಿಯಿಂದ ನೈನಿ ಮೃತ ಪಟ್ಟಿದ್ದಾರೆ ಎಂದು ತಿಳಿಸಿದೆ.

