ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ

Public TV
1 Min Read

ನವದೆಹಲಿ: ನಿವೃತ್ತ ಮುಖ್ಯ ನಾಯಮೂರ್ತಿ ಡಿವೈ ಚಂದ್ರಚೂಡ್‌ (DY Chandrachud) ಅವರು ವಾಸಿಸುತ್ತಿರುವ ಬಂಗಲೆಯನ್ನು ತಕ್ಷಣವೇ ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ (Supreme Court) ಆಡಳಿತ ಮಂಡಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಚಂದ್ರಚೂಡ್‌ ಅವರು ಪ್ರಸ್ತುತ ಕೃಷ್ಣ ಮೆನನ್ ಮಾರ್ಗದ 5ನೇ ಬಂಗಲೆಯಲ್ಲಿ ವಾಸವಾಗಿದ್ದಾರೆ. ಅನುಮತಿಸಲಾದ ಅವಧಿಯನ್ನು ಮೀರಿ ಅಧಿಕೃತ ನಿವಾಸವನ್ನು (Official Home) ವಾಸವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಡಳಿತ ಬಂಗಲೆಯನ್ನು ತುರ್ತಾಗಿ ಖಾಲಿ ಮಾಡಿಸುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ. ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

 

2022 ರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯಮಗಳ ನಿಯಮ 3 ಬಿ ಅಡಿಯಲ್ಲಿ, ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಯಾದ ನಂತರ ಆರು ತಿಂಗಳವರೆಗೆ ಅಧಿಕೃತ ಬಂಗಲೆಯಲ್ಲಿ ವಾಸವಾಗಿರಲು ಅನುಮತಿ ನೀಡಲಾಗುತ್ತದೆ. ಇದನ್ನೂ ಓದಿ: ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ- ದಲೈಲಾಮಾ ಜೊತೆ ಭಾರತದ ಸಂಬಂಧ ಹೇಗಿತ್ತು; ಚೀನಾ ಎಚ್ಚರಿಕೆ ಏನು?

ಆರು ತಿಂಗಳ ಅವಧಿ ಮೇ 10ಕ್ಕೆ ಮುಕ್ತಾಯಗೊಂಡಿದೆ. ಹೆಚ್ಚುವರಿಯಾಗಿ ನೀಡಲಾಗಿದ್ದ ವಿಶೇಷ ಅನುಮತಿಯು ಮೇ 31ಕ್ಕೆ ಕೊನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಂಗಲೆ ಅಧಿಕೃತ ಸುಪ್ರೀಂ ಕೋರ್ಟ್ ಹೌಸ್ ಪೂಲ್‌ನ ಭಾಗವಾಗಿದ್ದು ಮರುಹಂಚಿಕೆಗಾಗಿ ಹಿಂತಿರುಗಿಸಬೇಕು ಎಂದು ಆಡಳಿತವು ತಿಳಿಸಿದೆ.

Share This Article