ಜಾತಿ ಕಿರುಕುಳಕ್ಕೆ ಬೇಸತ್ತು IPS ಅಧಿಕಾರಿ ಸಾವು – IAS ಪತ್ನಿ ದೂರು ನೀಡಿದ್ರೂ FIR ದಾಖಲಿಸದ ಪೊಲೀಸರು

Public TV
2 Min Read

– ಡಿಜಿಪಿ, ಎಸ್ಪಿ ವಿರುದ್ಧವೇ ಪೊಲೀಸರಿಗೆ ಪತ್ನಿ ದೂರು; ಸಿಎಂಗೆ ಪತ್ರ ಬರೆದು ನ್ಯಾಯಕ್ಕೆ ಮನವಿ
– ಒಂದಲ್ಲ 3 ಸೂಸೈಡ್ ನೋಟ್ ಬರೆದಿಟ್ಟಿದ್ದ ಐಪಿಎಸ್ ಅಧಿಕಾರಿ

ಚಂಡೀಗಢ: ಇದೇ ಅಕ್ಟೋಬರ್ 7 ರಂದು ಚಂಡೀಗಢದ (Chandigarh) ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ (IPS officer) ಅಮ್ನೀತ್ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಗೆ ಪತ್ರ ಬರೆದಿದ್ದಾರೆ.

8 ಪುಟಗಳ ಆತ್ಮಹತ್ಯೆ ಟಿಪ್ಪಣಿ ಮತ್ತು ಔಪಚಾರಿಕ ದೂರಿನ ಹೊರತಾಗಿಯೂ ಯಾವುದೇ ಎಫ್‌ಐಆರ್ (FIR) ದಾಖಲಿಸಲಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಪತಿಯ ಆತ್ಮಹತ್ಯೆ ಪತ್ರವನ್ನು ಉಲ್ಲೇಖಿಸಿ ಬರೆದ ಪತ್ರದಲ್ಲಿ, ಕಿರುಕುಳ, ಅವಮಾನ ಮತ್ತು ಮಾನಸಿಕ ಹಿಂಸೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಗಳ ಎಲ್ಲಾ ವಿವರಗಳನ್ನು ನೀಡಿದರು, ಚಂಡೀಗಢ ಪೊಲೀಸರು, ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಟೇಕಾಫ್‌ ಆದ ಕೆಲವೇ ಹೊತ್ತಲ್ಲಿ ಸ್ಕಿಡ್‌ ಆಗಿ ಹುಲ್ಲಿನ ಮೇಲೆ ಬಿದ್ದ ಪ್ರೈವೆಟ್ ಜೆಟ್‌

ಹರಿಯಾಣ ಪೊಲೀಸ್ (Haryana Police) ಮತ್ತು ಆಡಳಿತದ ಪ್ರಭಾವಿ ಉನ್ನತ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರು ಚಂಡೀಗಢ ಪೊಲೀಸರ ಮೇಲೆ ಪ್ರಭಾವ ಬೀರುತ್ತಿರುವುದೇ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣ. ಈ ಉನ್ನತ ಹುದ್ದೆಯಲ್ಲಿರುವ, ಪ್ರಭಾವಿ ಅಧಿಕಾರಿಗಳು ನನ್ನ ಮತ್ತು ನನ್ನ ಕುಟುಂಬದ ಮೇಲೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ ಮತ್ತು ಬೇರೆ ರೀತಿಯಲ್ಲಿ ನನ್ನನ್ನು ಸಿಲುಕಿಸಲು ಪ್ರಯತ್ನಿಸಬಹುದು ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ ನಯಾಬ್‌ ಸಿಂಗ್​ ಸೈನಿ ನೇತೃತ್ವದಲ್ಲಿ ಹರಿಯಾಣ ಸರ್ಕಾರದ ನಿಯೋಗದೊಂದಿಗೆ ಅಮ್ನೀತ್ ಅವರು ಜಪಾನ್​ಗೆ ತೆರಳಿದಾಗ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ವಿಷಯ ತಿಳಿದು ಅವರು ತಕ್ಷಣವೇ ಅವರು ಪ್ರವಾಸದಿಂದ ಹಿಂತಿರುಗಿದ್ದರು. ಇದನ್ನೂ ಓದಿ: ಭಾರತದಲ್ಲಿ 9 ಬ್ರಿಟಿಷ್‌ ವಿವಿ ಕ್ಯಾಂಪಸ್‌ಗಳ ಸ್ಥಾಪನೆ: ಬ್ರಿಟನ್‌ ಪ್ರಧಾನಿ ಘೋಷಣೆ

ತಾವು ಜಪಾನ್​ನಿಂದ ಮರಳಿದ ತಕ್ಷಣ ಪತಿಯ ಲ್ಯಾಪ್​ಟಾಪ್​ ಬ್ಯಾಗ್​ನಲ್ಲಿ ಡೆತ್‌ನೋಟ್‌ನ 2ನೇ ಪ್ರತಿ ಸಿಕ್ಕಿದೆ. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಹಿನ್ನೆಲೆಯಲ್ಲಿ ಜಾತಿ ತಾರತಮ್ಯಕ್ಕೆ ಒಳಗಾಗಿದ್ದರು. ರೋಹ್ಟಕ್​ ಎಸ್​ಪಿ ನರೇಂದ್ರ ಬಿಜರ್ನಿಯಾ, ಡಿಜಿಪಿ ಕಪೂರ್​ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಅರ್ಬನ್​ ಎಸ್ಟೇಟ್​​ ಪೊಲೀಸ್​ ಠಾಣೆಯಲ್ಲಿ ಅವರ ವಿರುದ್ಧ ಸುಳ್ಳು ಎಫ್​ಐಆರ್​ ದಾಖಲಿಸಲಾಗಿದೆ. ಈ ಘಟನೆಯಿಂದಾಗಿ ಪತಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದರು. ಈ ವಿಷಯವನ್ನು ಡಿಜಿಪಿ ಮತ್ತು ಎಸ್ಪಿ ಜೊತೆ ಚರ್ಚಿಸಲು ಪತಿ ಮಾಡಿದ ಪ್ರಯತ್ನಗಳು ವಿಫಲವಾದ ಕಾರಣ ಅವರು ಈ ರೀತಿಯ ನಿರ್ಧಾರ ತೆಗೆದುಕೊಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೆಷಲ್‌ ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ, ಬಾಲಕೋಟ್ ತಿರಮಿಸು ತಿಂದ ಭಾರತೀಯ ವಾಯುಸೇನೆ

ಅಮ್ನಿತ್‌ ತಮ್ಮ ಪತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು ಮತ್ತು ಅವರ ಆತ್ಮಹತ್ಯೆ ಪತ್ರ ಮತ್ತು ಉಯಿಲು ಪತ್ರವನ್ನು ಸ್ವೀಕರಿಸಿದ ನಂತರ ಅವರಿಗೆ 15 ಬಾರಿ ಕರೆ ಮಾಡಿರುವುದಾಗಿ ಹೇಳಿದರು. ಅವರ ಕರೆಗಳಿಗೆ ಉತ್ತರಿಸದ ಹಿನ್ನಲೆ ತಮ್ಮ ಚಿಕ್ಕ ಮಗಳಿಗೆ ವಿಚಾರಿಸಲು ಕರೆ ಮಾಡಲಾಯಿತು, ಅವರು ಮನೆಗೆ ಧಾವಿಸಿದಾಗ, ನೆಲಮಾಳಿಗೆಯಲ್ಲಿ ರೆಕ್ಲೈನರ್ ಮೇಲೆ ತನ್ನ ಪತಿಯ ನಿರ್ಜೀವ ದೇಹವು ಕಂಡುಬಂದಿತು ಎಂದು ವಿವರಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ತನಿಖೆಯ ಮೇಲೆ ಹಸ್ತಕ್ಷೇಪ, ಸಾಕ್ಷ್ಯಾಧಾರಗಳ ತಿರುಚುವಿಕೆ ಅಥವಾ ಪ್ರಭಾವ ತಡೆಯಲು ಆರೋಪಿತರನ್ನು ಅಮಾನತುಗೊಳಿಸುವಂತೆಯೂ ಅವರು ಕೋರಿದ್ದಾರೆ.

Share This Article