ಬೆಂಗಳೂರು: ನಾಳೆ ದೆಹಲಿಗೆ ಹೋಗಿತ್ತಿದ್ದು, ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ನಾಳೆ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡುತ್ತಿದ್ದೇನೆ. ಅಸ್ಸಾಂ ವಿಚಾರವಾಗಿ ನಾನು ಭೇಟಿ ಮಾಡುತ್ತೇನೆ. ನಾಳೆ ಸಭೆ ಇದೆ, ಮಧ್ಯಾಹ್ನ ಇದೆ. ನಾನು ನಾಳೆ ಹೋಗ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಗೆ ಮರಳುವಂತೆ ಕಾರ್ಯಕರ್ತರಿಂದ ಒತ್ತಡ ಬರುತ್ತಿದೆ: ಈಶ್ವರಪ್ಪ
ರಾಹುಲ್ ಗಾಂಧಿ ಭೇಟಿ ಬಳಿಕ ಸಂದೇಶ ರವಾನೆಯಾಗಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ ರೀ. ಅದೇನೂ ಹೊಸತಾ? ರಾಹುಲ್ ಗಾಂಧಿ ಭೇಟಿ ಮಾಡೋದು, ಫೋನ್ ಮಾಡೋದು ಪಬ್ಲಿಕ್‌ನಲ್ಲಿ ಚರ್ಚೆ ಮಾಡೋದು ಅಲ್ಲ ಎಂದರು.
ರಾಹುಲ್ ಗಾಂಧಿ ಮುಂದೆ ನಿಮ್ಮ ಬಯಕೆ ಮುಂದಿಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಿಮ್ಮ ಬಯಕೆಯನ್ನೂ ಇಡುತ್ತೀನಿ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಗ್ಗೆ ಮಾತನಾಡಿ, ಅದು ನಂದು ಡ್ಯೂಟಿ ಬಂದಾಗ ಎಲ್ಲ ಭೇಟಿ ಮಾಡ್ತೇನೆ. ಪ್ರೋಟೋಕಾಲ್ ಇದೆ. ರಿಸೀವ್ ಮಾಡೋದು, ಭೇಟಿ ಮಾಡೋದು ಪ್ರೋಟೋಕಾಲ್ ಇದೆ ಎಂದು ಹೇಳಿದರು. ಇದನ್ನೂ ಓದಿ: ಸರ್ವ ಧರ್ಮಗ್ರಂಥಗಳ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಸಂಸ್ಕೃತಿ ಕಲಿತಿಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ರಾಹುಲ್ ಗಾಂಧಿ ಜೊತೆ ಪ್ರತ್ಯೇಕ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದೆಲ್ಲ ಡಿಸ್ಕ್ಲೋಸ್ ಮಾಡೋಕೆ ಆಗಲ್ಲ. ನಾನು ಮಾತನಾಡಿಲ್ಲ ಅಂತಾ ಹೇಳಲ್ಲ. ಅದು ನಮಗೆ ಬಿಟ್ಟದ್ದು, ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

