ನಾಳೆ ಆರ್‌ಸಿಬಿ ಮ್ಯಾಚ್‌ – ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ

Public TV
1 Min Read

ಬೆಂಗಳೂರು: ಶನಿವಾರ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ಹಿನ್ನೆಲೆಯಲ್ಲಿ ಆಹಾರ ಮತ್ತು ಸುರಕ್ಷತಾ ಇಲಾಖೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಆಹಾರ ಪರೀಕ್ಷೆ ನಡೆಸಲು ಮುಂದಾಗಿದೆ.

ಸ್ಟೇಡಿಯಂ ಕ್ಯಾಂಟೀನ್‌ನಲ್ಲಿರುವ ಆಹಾರ ಸೇವಿಸಿ ವ್ಯಕ್ತಿಯೊಬ್ಬರು ಅಸ್ವಸ್ಥರಾದ ವರದಿ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತಾ ಇಲಾಖೆ ಎಚ್ಚೆತ್ತುಕೊಂಡು ಪರೀಕ್ಷೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ ಪತ್ರದ ಮೂಲಕ ತಿಳಿಸಿದೆ. ಇದನ್ನೂ ಓದಿ: ಸಿಎಸ್‌ಕೆಗೆ ಗುಡ್‌ನ್ಯೂಸ್‌, ಆರ್‌ಸಿಬಿಗೆ ಬ್ಯಾಡ್‌ ನ್ಯೂಸ್‌ – ಮುಂದಿನ 5 ದಿನ ಬೆಂಗ್ಳೂರಿನಲ್ಲಿ ಮಳೆ ವಾತಾವರಣ ಹೇಗಿದೆ?

ಪರೀಕ್ಷೆ ಹೇಗೆ?
ಕ್ಯಾಂಟೀನ್‌ನಲ್ಲಿ ಸಿದ್ಧವಾದ ಆಹಾರವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದರೆ ಆ ಆಹಾರವನ್ನು ವಿತರಣೆ ಮಾಡಲು ಅನುಮತಿ ನೀಡಲಾಗುತ್ತದೆ.

ಒಂದು ವೇಳೆ ಪಾಸಿಟಿವ್‌ ಬಂದರೆ ಆಹಾರ ವಿತರಣೆ ಮಾಡುವ ಕ್ಯಾಂಟೀನ್‌ ಮುಚ್ಚಿ ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

Share This Article