ಭಾನುವಾರವೂ ತಟ್ಟಲಿದೆ ಬೆಂಗ್ಳೂರಿಗೆ ಟ್ರಾಫಿಕ್ ಬಿಸಿ -ವೀಕೆಂಡ್ ಪ್ಲಾನ್ ಮಾಡಿಕೊಳ್ಳೋರು ಹುಷಾರ್!

Public TV
1 Min Read

ಬೆಂಗಳೂರು: ಭಾನುವಾರ ಕೂಡ ಬೆಂಗಳೂರಿನಿಂದ ಮೈಸೂರು, ಮಂಡ್ಯ, ರಾಮನಗರ, ಬಿಡದಿ ಚನ್ನಪಟ್ಟಣ ಭಾಗಕ್ಕೆ ಹೋಗುವವರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಈ ಮೂಲಕ ತಮಿಳುನಾಡಿನ ವಿರುದ್ಧ ಕನ್ನಡಿಗರ ಪ್ರತಿಭಟನೆಯ ಕಿಚ್ಚು ಹಬ್ಬಲಿದೆ. ಹೀಗಾಗಿ ಸಂಡೇ ಸುತ್ತಾಡೋಣ ಎಂದು ಪ್ಲಾನ್ ಮಾಡಿಕೊಂಡಿರುವವರು ಹುಷಾರಾಗಿರಿ.

ಮೈಸೂರು ಮತ್ತು ಚಾಮರಾಜನಗರದ ಕೆಲ ಯುವಕರು ಇತ್ತೀಚೆಗೆ ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕೊಯಮತ್ತೂರಿನಲ್ಲಿ ಬೈಕ್‍ನಲ್ಲಿ ಬಂದ ಸ್ಥಳೀಯ ಯುವಕರು ಕಾರನ್ನು ಅಡ್ಡಗಟ್ಟಿ, ಆ ಬಳಿಕ ಕಾರಿನ ಮುಂಭಾಗ ಕಟ್ಟಿದ್ದ ಕನ್ನಡ ಬಾವುಟ ತೆಗೆಯುವಂತೆ ಗಲಾಟೆ ಮಾಡಿದ್ದಾರೆ. ಇದನ್ನು ಖಂಡಿಸಿ ಭಾನುವಾರ 101 ವಾಹನಗಳಿಗೆ ಕನ್ನಡದ ಧ್ವಜ ಕಟ್ಟಿ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನವರೆಗೆ ಬೃಹತ್ ರ‍್ಯಾಲಿ ನಡೆಸಲಾಗುತ್ತದೆ.

ನಾನಾ ಕನ್ನಡ ಸಂಘಟನೆಗಳಿಂದ ಈ ಪ್ರತಿಭಟನೆ ನಡೆಯಲಿದೆ. ಡಾ.ರಾಜ್ ಸಮಾಧಿಯಿಂದ ಬೆಳಗ್ಗೆ 7 ಗಂಟೆಗೆ ಬೃಹತ್ ರ‍್ಯಾಲಿ ನಡೆಯಲಿದೆ. ಹೀಗಾಗಿ ಹೊಸೂರು ರಸ್ತೆಯವರೆಗೆ ರ‍್ಯಾಲಿ ನಡೆಯಲಿದ್ದು, ಟ್ರಾಫಿಕ್ ಜಾಮ್ ಸಂಭವಿಸಲಿದೆ.

ಜಾಥದ ಮಾರ್ಗ ಹೀಗಿರಲಿದೆ: ರಾಜ್ ಕುಮಾರ್ ಸಮಾಧಿ, ನಾಯಂಡಹಳ್ಳಿ, ನೈಸ್ ರೋಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಮೂಲಕ ಅತ್ತಿಬೆಲೆ ಮೂಲಕ ಹೊಸೂರುಗೆ ಜಾಥಾ ನಡೆಯಲಿದೆ. ಇದರಿಂದ ಈ ಮಾರ್ಗದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಲಿದೆ.

Share This Article
Leave a Comment

Leave a Reply

Your email address will not be published. Required fields are marked *