21 ಲಕ್ಷ ಮೌಲ್ಯದ ಟೊಮೆಟೋ ತುಂಬಿದ್ದ ಲಾರಿ ನಾಪತ್ತೆ ಕೇಸ್‌ – ಹಣದೊಂದಿಗೆ ಚಾಲಕ, ಕ್ಲೀನರ್ ಪರಾರಿ

Public TV
2 Min Read

ಕೋಲಾರ: 21 ಲಕ್ಷ ರೂ. ಮೌಲ್ಯದ ಟೊಮೆಟೋ (Tomato) ಹೊತ್ತುಕೊಂಡು ಕೋಲಾರದಿಂದ (Kolara) ರಾಜಸ್ಥಾನಕ್ಕೆ ತೆರಳುತ್ತಿದ್ದ ಲಾರಿ ಕಳ್ಳತನಕ್ಕೆ (Lorry Theft) ಟ್ವಿಸ್ಟ್‌ ಸಿಕ್ಕಿದೆ.

ಚಾಲಕ ಹಾಗೂ ಲಾರಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಕೋಲಾರ ನಗರ ಠಾಣೆಗೆ ಮಂಡಿ ಮಾಲೀಕರು ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಶುರು ಮಾಡಿದಾಗ ಟೊಮೆಟೋವನ್ನು ಗುಜರಾತ್‍ನ (Gujarat) ಅಹಮದಾಬಾದ್‌ನಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಟೊಮೆಟೋ ಮಾರಾಟ ಮಾಡಿ ಹಣ ಪಡೆದು ಚಾಲಕ ಹಾಗೂ ಕ್ಲೀನರ್ ನಾಪತ್ತೆಯಾಗಿದ್ದಾರೆ.

ಕೋಲಾರದ ಮಂಡಿ ಮಾಲೀಕರಾದ ಸಕ್ಲೇನ್ ಹಾಗೂ ಮುನಿರೆಡ್ಡಿ ಅವರು ಈ ಮಾಹಿತಿ ನೀಡಿದ್ದು, ಮೆಹತ್ ಟ್ರಾನ್ಸ್‌ಪೋರ್ಟ್‌ ಮಾಲೀಕ ಸಾಧಿಕ್ ಅವರು ಈಗ ಗುಜರಾತ್‌ನತ್ತ ಹೊರಟಿದ್ದು ಅಲ್ಲೇ ದೂರು ನೀಡಲು ಮುಂದಾಗಿದ್ದಾರೆ.  ಇದನ್ನೂ ಓದಿ: ಖುಷ್ಬು ಉಡುಪಿ ಭೇಟಿ ವೇಳೆ ಆಸ್ಕರ್ ಫರ್ನಾಂಡಿಸ್ ಸಂಬಂಧಿಗೆ ಏನು ಕೆಲಸ? – ಬಿಜೆಪಿ ಪ್ರಶ್ನೆ

ಏನಿದು ಪ್ರಕರಣ?
ಕೋಲಾರ ಎಪಿಎಂಸಿ ಮಾರುಕಟ್ಟೆಯ (APMC Market) ಎ.ಜಿ.ಟ್ರೇಡರ್ಸ್‌ನ ಸಕ್ಲೇನ್‌ ಹಾಗೂ ಎಸ್‌.ವಿ.ಟಿ. ಟ್ರೇಡರ್ಸ್‌ನ ಮುನಿರೆಡ್ಡಿ ಎಂಬುವರು ಸುಮಾರು 21 ಲಕ್ಷ ಮೌಲ್ಯದ ಸುಮಾರು 750 ಕ್ರೇಟ್‌ (11 ಟನ್‌) ಟೊಮೆಟೋವನ್ನು ಜುಲೈ 27ರಂದು ರಾಜಸ್ಥಾನದ ಜೈಪುರಕ್ಕೆ ಮೆಹತ್‌ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಲಾರಿಯ ಮೂಲಕ ಕಳುಹಿಸಿಕೊಟ್ಟಿದ್ದರು.

ನಿಗದಿ ಪ್ರಕಾರ ಶನಿವಾರ ರಾತ್ರಿ ಜೈಪುರಕ್ಕೆ ಲಾರಿ ತಲುಪಬೇಕಿತ್ತು. ಶನಿವಾರ ಮಧ್ಯಾಹ್ನದವರೆಗೆ ವ್ಯಾಪಾರಿಗಳ ಜೊತೆ ಲಾರಿ ಚಾಲಕ ಅನ್ವರ್‌ ಸಂಪರ್ಕದಲ್ಲಿದ್ದ. ಆ ನಂತರ ಆತನ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಠಾಣೆಯಲ್ಲಿ ದೂರು ನೀಡಿದ ಬಳಿಕ ಚಾಲಕ ಗುಜರಾತ್‌ನಲ್ಲಿ ಟೊಮೆಟೋ ಮಾರಾಟ ಮಾಡಿರುವ ವಿಷಯ ತಿಳಿದು ಬಂದಿದೆ.

 

ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೆಟೋ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಂದ ಹೊರ ರಾಜ್ಯಗಳು ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಟೊಮೆಟೋವನ್ನು ಕಳುಹಿಸಿಕೊಡಲಾಗುತ್ತದೆ. ಆದರೆ ಕಳೆದ ಕೆಲ ದಿನಗಳಿಂದ ಟೊಮೆಟೋ ಬಂಗಾರವಾಗಿದ್ದು ರೈತರು ಜಮೀನಿನಲ್ಲಿ ಕಾಯುತ್ತಿದ್ದರೆ ಇತ್ತ ಮಾರುಕಟ್ಟೆಯಲ್ಲಿ ಸಿಸಿ ಟಿವಿ ಹಾಗೂ ಪೊಲೀಸ್ ಕಣ್ಗಾವಲನ್ನು ಇರಿಸಲಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಟೊಮೆಟೋವನ್ನು ಕೋಲಾರದ ರೈತರು ಬೆಳೆಯುತ್ತಾರೆ. ಅದರಲ್ಲೂ ಉತ್ತಮ ಗುಣಮಟ್ಟದ ಟೊಮೆಟೋ ಬೆಳೆದರೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈಗ ಹಲವು ಮಾರಕ ಕಾಯಿಲೆಗಳು ಬಂದ ಹಿನ್ನೆಲೆ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಬೆಲೆ ಭಾರೀ ಏರಿಕೆಯಾಗಿದೆ.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್