ಧಾರವಾಡಕ್ಕೆ ಬಂದು ಹಳೆಯ ಗೆಳೆಯರನ್ನು ಭೇಟಿಯಾದ ತೆಲುಗಿನ ಖ್ಯಾತ ನಟ ಶ್ರೀಕಾಂತ್

Public TV
1 Min Read

ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿರುವ ಟಾಲಿವುಡ್ ನಟ ಶ್ರೀಕಾಂತ್ (Srikanth) ಅವರು ಇಂದು (ಸೆ.15) ಧಾರವಾಡಕ್ಕೆ (Dharawad) ಬಂದು ತಮ್ಮ ಹಳೆಯ ಗೆಳೆಯರನ್ನು ಭೇಟಿ ಮಾಡಿ, ಉಪಹಾರ ಸೇವಿಸಿ ಹೋಗಿದ್ದಾರೆ.

ಮೂಲತಃ ಗಂಗಾವತಿಯವರಾದ ಶ್ರೀಕಾಂತ್, ಧಾರವಾಡ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದ ಅವರು, ತಮ್ಮ ಸ್ವಂತ ಊರು ಗಂಗಾವತಿಗೆ ಹೊರಟಿದ್ದರು. ಈ ವೇಳೆ, ಧಾರವಾಡದ ತಮ್ಮ ಸ್ನೇಹಿತ ಉಪವನ ಹೋಟೆಲ್ ಮಾಲೀಕರಾದ ದಿನೇಶ ಶೆಟ್ಟಿ ಅವರ ಮನೆಗೆ ನಟ ಭೇಟಿ ಕೊಟ್ಟು ಅವರ ಮನೆಯಲ್ಲೇ ಬೆಳಗಿನ ಉಪಹಾರ ಸೇವಿಸಿದ್ದಾರೆ.

ಕಾಲೇಜು ದಿನಗಳಲ್ಲಿ ಉಪವನ ಹೋಟೆಲ್‌ನಲ್ಲೇ ಶ್ರೀಕಾಂತ್ ಅವರು ಉಪಹಾರ ಮಾಡುತ್ತಿದ್ದರು. ಹೀಗಾಗಿ ಆಗಾಗ ತಮ್ಮ ಗೆಳೆಯರ ಭೇಟಿಗೆ ಶ್ರೀಕಾಂತ್ ಅವರು ಧಾರವಾಡಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಇದನ್ನೂ ಓದಿ:ಬಾಲಿವುಡ್ ಆಫರ್ ಬಾಚಿಕೊಂಡ ‘ಸೀತಾ ರಾಮಂ’ ನಟಿ

ಅಂದಹಾಗೆ, ಕನ್ನಡದ ಯುಗಾದಿ, ಪುನೀತ್ ರಾಜ್‌ಕುಮಾರ್ ಜೊತೆ ‘ಜೇಮ್ಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ರೀಕಾಂತ್ ನಟಿಸಿದ್ದಾರೆ.

Share This Article