ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

By
2 Min Read

ಟಾಲಿವುಡ್‌ನ ಈ ಸ್ಟಾರ್‌ಗೆ ಹೆಸರೂ ಇದೆ ಹಣಾನೂ ಇದೆ. ಮೂವರು ಮಕ್ಕಳು, ಮಕ್ಕಳೆಲ್ಲಾ ಸ್ಟಾರ್ಸು. ಇದೀಗ ಆ ಸ್ಟಾರ್‌ಗೆ ಗಳಿಸಿದ ಆಸ್ತಿಯೇ ತಲೆನೋವು ತಂದಿದೆ. ಎದೆಎತ್ತರಕ್ಕೆ ಬೆಳೆದ ಮಕ್ಕಳು ಕಿತ್ತಾಡ್ಕೊಂಡು ಮೂರು ದಿಕ್ಕಲ್ಲಿ ದಾರಿ ಕಂಡುಕೊಂಡಿದ್ದಾರೆ. ಈ ಕಡೆ ತಂದೆ ಇನ್ನೊಂದು ದಾರಿ ಹಿಡಿದು ಹೊರಟಿದ್ದಾರೆ. ಏನಿದು ಟಾಲಿವುಡ್‌ನಲ್ಲಿ ಗುಲ್ಲಾಗಿರೋ ಜ್ಯುಬಲಿಹಿಲ್ಸ್ ಗಲ್ಲಿ ಸಮಾಚಾರ ಗೊತ್ತೇ..?

ಟಾಲಿವುಡ್‌ನ (Tollywood)  ಶ್ರೀಮಂತ ನಟರಲ್ಲಿ ಇವರೂ ಒಬ್ಬರು. 90ರ ಕಾಲದ ಸೂಪರ್ ಸ್ಟಾರ್. ನಮ್ಮ್ ಅಂಬರೀಶ್ ಅವರ ಆಪ್ತಮಿತ್ರ. ಅವರ ಹೆಸರೇ ಡೈಲಾಗ್ ಕಿಂಗ್ ಮೋಹನ್ ಬಾಬು. ಡಿಫರೆಂಟ್ ಸ್ಟೈಲ್‌ನಿಂದ ಟಾಲಿವುಡ್‌ನಲ್ಲಿ ಭದ್ರನೆಲೆಕಂಡುಕೊಂಡ ಮೋಹನ್‌ಬಾಬುಗೆ ಮೂವರು ಮಕ್ಕಳು. ವಿಷ್ಣು ಮಂಚು(Vishnu Manchu)  ಮತ್ತು ಮನೋಜ್ ಮಂಚು (Manoj Manchu) ಹಾಗೂ ಲಕ್ಷ್ಮಿ ಮಂಚು. ಮೂರೂ ಮಕ್ಕಳು ಸ್ಟಾರೇ. ಆದರೆ ವಿಷ್ಣು ಹಾಗೂ ಮನೋಜ್ ಮಂಚುವಿನ ಪರಸ್ಪರ ಕಿತ್ತಾಟ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಉಳಿದಿಲ್ಲ. ಕೈಕೈಮಿಲಾಯಿಸಿಕೊಂಡು ಹೊಡೆದಾಡಿಕೊಂಡ ವೀಡಿಯೋ ವೈರಲ್ ಆಗಿ ಇಳಿವಯಸಿನಲ್ಲಿ ಮೋಹನ್ ಬಾಬು(Mohan Babu) ತಲೆಕೆಡಿಸಿಕೊಳ್ಳುವಂತಾಯ್ತು. ಇನ್ನು ಮಗಳು ಲಕ್ಷ್ಮಿ ಕೂಡ ತಮ್ಮದೇ ಸೆಪರೇಟ್ ಮನೆ ಮಾಡ್ಕೊಂಡು ವಾಸವಿದ್ದಾಳೆ.

ಮಕ್ಕಳು ಅವರವರ ಪಾಡಿಗೆ ದೂರ ಇದ್ರೂ ಮೋಹನ್ ಬಾಬು ತಲೆ ಕೆಡಿಸಿಕೊಳ್ತಿರಲಿಲ್ಲವೇನೋ ಆದರೆ ಆಗಿರೋದು ಬೇರೆ ಅನ್ನುತ್ತದೆ ಟಾಲಿವುಡ್ ಮೂಲ. ಮಕ್ಕಳ ಜಗಳ ನೋಡಲಾರದೆ ಮೋಹನ್ ಬಾಬು ಆಸ್ತಿ ಪಾಲು ಮಾಡಲು ಅಲೆಯುತ್ತಿದ್ದಾರೆ. ಆಂಧ್ರದ ರಿಜಿಸ್ಟರ್ ಆಫೀಸ್‌ಗೂ ಮೋಹನ್ ಬಾಬು ಕಾಲಿಟ್ಟಿದ್ದು ಮಕ್ಕಳಿಗೆ ಆಸ್ತಿ ಪಾಲು ಮಾಡಿ ಪಾರಾಗುತ್ತಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ನೆಮ್ಮದಿ ಜೀವನ ಕಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ. ಅದಕ್ಕೆ ಹೇಳೋದು ಹಣ ಅತಿಯಾಗಿದ್ದರೂ ಕಷ್ಟವೇ.

ಸ್ಟಾರ್ ನಟರ ಕುಟುಂಬ, ಕಲಾವಿದರು ಅಂದ ಮೇಲೆ ಅಭಿಮಾನಿಗಳಿಗೆ ಪ್ರೇರಣೆಯಾಗಬೇಕು. ಕೂಡಿ ಬಾಳುವ ಮೂಲಕ ಫ್ಯಾನ್ಸ್ಗೆ ಉದಾಹರಣೆಯಾಗಿ ನಿಲ್ಲಬೇಕು. ಆದರೆ ಮೋಹನ್ ಬಾಬು ಅವರ ಮನೆಯ ಜಗಳ ನೋಡಿ ಆಡಿಕೊಳ್ಳುವವರ ಬಾಯಿಗೆ ಗುರಿಯಾಗಿದ್ದಾರೆ. ಮುಂದೆ ಏನಾಗತ್ತೋ ಕಾಯಬೇಕಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್