ಟಾಲಿವುಡ್ (Tollywood) ಅಂಗಳದಲ್ಲಿ ಮೆಗಾಸ್ಟಾರ್ ಆಗಿ ಮಿಂಚ್ತಿರುವ ಚಿರಂಜೀವಿ (Megastar Chiranjeevi) ಇದೀಗ ಸಿನಿಮಾ ತಂತ್ರಜ್ಞರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಹಣಕ್ಕಾಗಿ ಪರದಾಡುತ್ತಿದ್ದ ಸೀನಿಯರ್ ಕ್ಯಾಮರಾಮೆನ್‌ಗೆ ನಟ ಚಿರಂಜೀವಿ ಸಹಾಯ ಮಾಡಿದ್ದಾರೆ.


ಪಿ ದೇವರಾಜ್, ತೆಲುಗು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ಸಿನಿಮಾಟೋಗ್ರಾಫರ್ ಆಗಿದ್ದವರು. ನಟ ಎನ್‌ಟಿಆರ್, ಸೂಪರ್ ಸ್ಟಾರ್ ಕೃಷ್ಣ, ಅಕ್ಕಿನೇನಿ ನಾಗೇಶ್ವರ ರಾವ್ ಹಾಗೂ ಸ್ವತಃ ನಟ ಚಿರಂಜೀವಿಯವರ ಆರಂಭಿಕ ಸಿನಿಮಾಗಳಿಗೆ ತಂತ್ರಜ್ಞರಾಗಿ ದುಡಿದವರು. ತೆಲುಗಿನ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಆದರೆ ವಯೋಸಹಜ ಸಮಸ್ಯೆಯಿಂದ ಆರೋಗ್ಯ ಹದಗೆಟ್ಟು, ಆರ್ಥಿಕ ಪರಿಸ್ಥಿತಿಯೂ ಹಾಳಾಗಿತ್ತು. ಇದೀಗ ಸೂಕ್ತ ಸಮಯಕ್ಕೆ ನಟ ಚಿರಂಜೀವಿ ಅವರು ಪಿ. ದೇವರಾಜ್ ಅವರಿಗೆ ಸಹಾಯ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

