ಟೋಲ್ ಸುಂಕ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆಯೇ ವಾಹನ ಚಾಲನೆ!

Public TV
1 Min Read

ಬೆಂಗಳೂರು: ಟೋಲ್ ಸುಂಕ ಕೇಳಿದ್ದಕ್ಕೆ ಜೀಪ್ ಚಾಲಕನೊಬ್ಬ ಸಿಬ್ಬಂದಿ ಮೇಲೆ ವಾಹನ ಚಲಾಯಿಸಿರುವ ಘಟನೆ ಬೆಂಗಳೂರು ಹೊರವಲಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನೆಲಮಂಗಲ ಸಮೀಪದ ಪಾರ್ಲೆ ಜೀ ಕಂಪನಿ ಬಳಿ ಇರುವ ನವಯುಗ ಟೋಲ್ ನಲ್ಲಿ ಹದಿನೈದು ದಿನಗಳ ಹಿಂದೆ ಈ ಘಟನೆ ನಡೆದಿದೆ. ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಂಚಲನ ಮೂಡಿಸಿದೆ.

ಟೋಲ್ ಬೂತ್ ನಲ್ಲಿ ಸುಂಕ ಕೇಳಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ ಗೂಡ್ಸ್ ವಾಹನ ಚಾಲಕ ಜೀಪ್ ಚಲಾಯಿಸಿದ್ದಾನೆ. ಈ ಎಲ್ಲ ದೃಶ್ಯಗಳು ಟೋಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೀಪ್ ಹರಿಸಿದ ನಂತರವೂ ಟೋಲ್ ಸಿಬ್ಬಂದಿ ಸುಂಕ ಕೇಳಿದ್ದಾರೆ. ಆದರೆ ಬಳಿಕವೂ ಇಬ್ಬರು ಚಾಲಕರು ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.

ಈ ಘಟನೆಯ ನಂತರ ನವಯುಗ ಟೋಲ್ ಸಿಬ್ಬಂದಿ ಸ್ಥಳೀಯ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *