ಬೆಂ-ಮೈ ದಶಪಥ ಹೆದ್ದಾರಿ ಟೋಲ್ ಮತ್ತಷ್ಟು ದುಬಾರಿ- ಜೂನ್ 1ರಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ

Public TV
1 Min Read

ರಾಮನಗರ: ದಶಪಥ ಹೆದ್ದಾರಿಯಲ್ಲಿ (Bengaluru-Mysuru Expressway) ಸಂಚಾರ ಮತ್ತಷ್ಟು ದುಬಾರಿಯಾಗಿದ್ದು ಹೆದ್ದಾರಿ ಪ್ರಾಧಿಕಾರ 22% ರಷ್ಟು ಟೋಲ್ ದರ ಏರಿಕೆ ಮಾಡಿದೆ.

ಜೂನ್ 1 ರಿಂದಲೇ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಫಾಸ್ಟ್ ಟ್ಯಾಗ್ (Fastag) ಇರೋ ಕಾರಣ ವಾಹನ ಸವಾರರ ಗಮನಕ್ಕೂ ಬಾರದೇ ಹಣ ವಸೂಲಿ ಮಾಡಲಾಗುತ್ತಿದೆ. ಕಾರ್, ವ್ಯಾನ್, ಜೀಪ್‍ಗಳ ಏಕಮುಖ ಸಂಚಾರಕ್ಕೆ 135 ರೂ.ನಿಂದ 165ಕ್ಕೆ ಏರಿಕೆ (30 ರೂ. ಹೆಚ್ಚಳ) ಮಾಡಲಾಗಿದೆ. ಲಘು ವಾಹನಗಳು, ಮಿನಿ ಬಸ್‍ಗಳ ಏಕಮುಖ ಟೋಲ್ 220 ರೂ.ನಿಂದ 270ಕ್ಕೆ ಏರಿಕೆ(50ರೂ ಹೆಚ್ಚಳ).

ಟ್ರಕ್, ಬಸ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 460 ರೂ.ನಿಂದ 565ಕ್ಕೆ ಏರಿಕೆ(105 ಹೆಚ್ಚಳ). 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ 500 ರೂ.ನಿಂದ 615ಕ್ಕೆ ಏರಿಕೆ (115 ರೂ ಹೆಚ್ಚಳ). ಭಾರೀ ವಾಹನಗಳ ಏಕಮುಖ ಸಂಚಾರ 720 ರೂ.ನಿಂದ 885ಕ್ಕೆ ಏರಿಕೆ (165 ಹೆಚ್ಚಳ). 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ಏಕಮುಖ ಸಂಚಾರ 880 ರೂ.ನಿಂದ 1,080ಕ್ಕೆ ಏರಿಕೆ (200 ಹೆಚ್ಚಳ) ಮಾಡಲಾಗಿದೆ.

ಈ ಹಿಂದೆ ಏಪ್ರಿಲ್ 1ರಂದೇ ದರ ಏರಿಕೆ ಮಾಡಿದ್ದ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರ ಭಾರೀ ಆಕ್ರೋಶ ಹಿನ್ನೆಲೆಯಲ್ಲಿ ದರ ಹೆಚ್ಚಳವನ್ನು ವಾಪಸ್ ಪಡೆದಿತ್ತು. ಇದೀಗ ಮತ್ತೆ ಟೋಲ್ ದರ (Toll Rate) ಏರಿಕೆ ಮಾಡಲಾಗಿದ್ದು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎರಡು ತಿಂಗಳ GST ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ- ಕರ್ನಾಟಕಕ್ಕೆ ಸಿಕ್ಕಿದೆಷ್ಟು?

Share This Article