ಮಡಿಕೇರಿ: ʻಸಿʼ ಮತ್ತು ʻಡಿʼ ದರ್ಜೆ ಭೂಮಿಯಲ್ಲಿ (ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬಾರದು ಮತ್ತು ರೈತರಿಗೆ ಹಕ್ಕುಪತ್ರ (Farmer Land Rights) ನೀಡಬೇಕು ಎಂದು ಆಗ್ರಹಿಸಿ ರೈತ ಹೋರಾಟ ತಾಲೂಕು ಸಮಿತಿ ಕರೆ ನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್ (Somwarpet Bandh) ಯಶಸ್ವಿಯಾಗಿದೆ.
ಸೋಮವಾರಪೇಟೆ ತಾಲೂಕು ಮಾತ್ರವಲ್ಲದೇ ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ, ಆಲೂರು ಸಿದ್ದಾಪುರ ಭಾಗದಲ್ಲೂ ಬಂದ್ ಯಶಸ್ವಿಯಾಗಿ ನಡೆಯಿತು. ಇನ್ನೂ ಖಾಸಗಿ ಶಾಲೆಗಳಿಗೆ ಮೊದಲೇ ರಜೆ ನೀಡಿದ್ದರಿಂದ ಬಂದ್ ಎಫೆಕ್ಟ್ ತಟ್ಟಲಿಲ್ಲ, ಕೆಲ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಾರದ ಹಿನ್ನೆಲೆ ತರಗತಿಗಳೂ ನಡೆಯದ ಪ್ರಸಂಗ ಕಂಡುಬಂದಿತು. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್
ಕೂಲಿ ಕಾರ್ಮಿಕರ ಪರದಾಟ:
ಬಂದ್ ಹಿನ್ನೆಲೆ ಕೆಲ ಸರ್ಕಾರಿ ಶಾಲಾ, ಕಾಲೇಜು ಮಕ್ಕಳು ಕೂಲಿ ಕಾರ್ಮಿಕರು ಬಸ್ ಇಲ್ಲದೇ ಪರದಾಡಿದರು. ಇದೇ ಸಂದರ್ಭ ಸೋಮವಾರಪೇಟೆಯ ವಿವೇಕಾನಂದ ವೃತ್ತದಲ್ಲಿ ವಾಹನಗಳನ್ನ ತಡೆದ ರೈತರು ಅಕ್ರೋಶ ಹೋರ ಹಾಕಿದ್ರು. ಈ ವೇಳೆ ಟ್ರಾಫಿಕ್ ಸಮಸ್ಯೆಯಿಂದ ರೋಗಿಯೊಬ್ಬರು ಸರ್ಕಾರಿ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲೇ ಸಿಲುಕಿ ಒದ್ದಾಡಿದರು. ಇದನ್ನೂ ಓದಿ: ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ
ಬಂದ್ ಕುರಿತು ಮಾತನಾಡಿದ ಪ್ರತಿಭಟನಾಕಾರರು, ಕಳೆದ ಹಲವು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ವನ್ಯಪ್ರಾಣಿಗಳ ಉಪಟಳದ ನಡುವೆಯೂ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ, ಇತ್ತೀಚೆಗೆ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ನುಂಗಲಾರದ ತುತ್ತಾಗುತ್ತಿವೆ. ಸಿ ಮತ್ತು ಡಿ ಜಾಗದ ಸಮಸ್ಯೆ ರೈತರನ್ನು ಕಾಡುತ್ತಿದ್ದು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳಿಂದ ಆಗಾಗ್ಗೆ ಬರುತ್ತಿರುವ ನೋಟೀಸ್‌ಗಳು ರೈತರ ನಿದ್ದೆಗೆಡಿಸಿವೆ. ಇದನ್ನೂ ಓದಿ: ಸಚಿವ ಸಂಪುಟದಿಂದ ರಾಜಣ್ಣ ವಜಾ – ಪರಿಷತ್‌ನಲ್ಲಿ ಗದ್ದಲ ಗಲಾಟೆ
ಕೂರ್ಗ್ ಲ್ಯಾಂಡ್ ರೆಗ್ಯೂಲೇಶನ್ 1889ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ರೈತರಿಗೆ ಹಿಡುವಳಿ ಜಮೀನನ್ನ ನೀಡಲಾಗಿತ್ತು. ಉಳಿದಂತೆ ದಟ್ಟವಾದ ಅರಣ್ಯ, ಕಾಡು, ಬೆಟ್ಟಗುಡ್ಡ ಪ್ರದೇಶಗಳನ್ನ ಅರಣ್ಯ ಜಮೀನು ಎಂದು, ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಸರ್ಕಾರದ ಪೈಸಾರಿ ಜಮೀನೆಂದು ಗುರುತಿಸಲಾಗಿತ್ತು. ಜನಸಂಖ್ಯೆ ಬೆಳೆದಂತೆ ಪೈಸಾರಿ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯ ಕೈಗೊಂಡ ರೈತರು ಭೂ ಮಂಜೂರಾತಿ ಕಾಯ್ದೆ ಯಡಿ ಇದೇ ಜಾಗಕ್ಕೆ ಹಕ್ಕುಪತ್ರ ಮಾಡಿಕೊಂಡಿದ್ದಾರೆ. ಉಳಿದವರ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಈಗಲೂ ಬಾಕಿ ಉಳಿದಿವೆ. 1978ರಲ್ಲಿ ಸರ್ಕಾರದ ಆದೇಶದಂತೆ ಸರ್ಕಾರದ ಹೆಸರಿನಲ್ಲಿ ದಾಖಲಾಗಿರುವ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಸಿ ಮತ್ತು ಡಿ ಭೂಮಿ ಎಂದು ವರ್ಗೀಕರಿಸಿ ಅಂತಹ ಜಮೀನುಗಳನ್ನು ಮಾತ್ರ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಅಧೀನ ಕಚೇರಿಯ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ಹೆಸರಲ್ಲಿರುವ ಎಲ್ಲಾ ಜಮೀನುಗಳನ್ನು ಸ್ಥಳ ಪರಿಶೀಲನೆ ಮಾಡದೇ ಕಚೇರಿ ಯಲ್ಲಿಯೇ ಕುಳಿತುಕೊಂಡು ಪಟ್ಟಿಮಾಡಿ ʻಸಿ ಮತ್ತು ಡಿʼ ಜಮೀನುಗಳೆಂದು ರಾಜ್ಯ ಸರ್ಕಾರಕ್ಕೆ ವರದಿ ಮಾಡಿದ್ದಾರೆ. ವೈಜ್ಞಾನಿಕ ಸರ್ವೇ ಮಾಡದೆ, ಸಂಪೂರ್ಣವಾಗಿ ಪೈಸಾರಿ ಭೂಮಿಯನ್ನು ಸಿ ಮತ್ತು ಡಿ ಎಂದು ವರದಿ ನೀಡಿರುವುದರಿಂದ ಸಮಸ್ಯೆ ಎದುರಾಗಿದೆ ಎಂಬುದು ರೈತರ ಆರೋಪವಾಗಿದೆ. ಇದನ್ನೂ ಓದಿ: `SIR’ ಅಭಿಯಾನ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳ ಪ್ರತಿಭಟನೆ – ಲೋಕಸಭೆ, ರಾಜ್ಯಸಭೆಯ ಕಲಾಪ ಮುಂದೂಡಿಕೆ