ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ IAS ಅಧಿಕಾರಿ ವೀಡಿಯೋ ವೈರಲ್

Public TV
2 Min Read

ಪಾಟ್ನಾ: ಮಹಿಳಾ ಐಎಎಸ್ ಅಧಿಕಾರಿಯೊಬ್ಬರು (IAS Officer) ಶಾಲಾ ವಿದ್ಯಾರ್ಥಿನಿ (Student) ಕಾಂಡೋಮ್ (Condom) ಬೇಕೇ? ಎಂದು ಖಾರವಾಗಿ ಪ್ರಶ್ನಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಬಿಹಾರದ (Bihar) ಪಾಟ್ನಾದಲ್ಲಿ (Patna) ಮಹಿಳಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಸರ್ಕಾರ ಸ್ಯಾನಿಟರಿ ಪ್ಯಾಡ್ (Sanitary Pad) ನೀಡಬಹುದಾ ಎಂದು ಕೇಳಿದ ಪ್ರಶ್ನೆಗೆ ಅಧಿಕಾರಿ ಖಾರವಾಗಿ ಉತ್ತರಿಸಿದ್ದಾರೆ.

ಬಿಹಾರದ ವಿದ್ಯಾರ್ಥಿನಿಯೊಬ್ಬಳು, ಸರ್ಕಾರ 20-30 ರೂ.ಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದಾ ಎಂದು ಸರಳವಾಗಿ ಪ್ರಶ್ನಿಸಿದ್ದಾಳೆ. ಈ ವೇಳೆ ಉತ್ತರಿಸಿದ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ, ಇಂದು ನೀವು ಸ್ಯಾನಿಟರಿ ಪ್ಯಾಡ್ ಕೇಳುತ್ತಿದ್ದೀರಿ, ನಾಳೆ ಜೀನ್ಸ್ ಕೂಡಾ ಕೇಳುತ್ತೀರಿ. ಬಳಿಕ ಕೆಲವು ಸುಂದರವಾದ ಪಾದುಕೆಗಳನ್ನೂ ಏಕೆ ಕೇಳಬಾರದು? ಕೊನೆಗೆ ಸರ್ಕಾರ ನಿಮಗೆ ಕುಟುಂಬ ಯೋಜನೆ ವಿಧಾನ, ಕಾಂಡೋಮ್‌ಗಳನ್ನೂ ಕೂಡಾ ನೀಡುತ್ತದೆ ಎಂಬುದನ್ನು ನೀವು ನಿರೀಕ್ಷಿಸುತ್ತೀರಿ ಅಲ್ವಾ? ಎಂದು ಕೇಳಿದ್ದಾರೆ. ಇದನ್ನೂ ಓದಿ: ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

ಈ ವೇಳೆ ವಿದ್ಯಾರ್ಥಿನಿ, ಜನರ ಮತಗಳಿಂದ ತಾನೇ ಸರ್ಕಾರ ರಚನೆಯಾಗುತ್ತದೆ? ಸರ್ಕಾರ ಜನರ ಸೇವೆ ಮಾಡುವುದರಲ್ಲಿ ತಪ್ಪೇನಿದೆ? ಎಂದು ಕೇಳಿದ್ದಾಳೆ. ಇದಕ್ಕೆ ಸಿಡಿಮಿಡಿಗೊಂಡ ಅಧಿಕಾರಿ, ಇದು ಮೂರ್ಖನದ ಪರಮಾವಧಿ. ನಿಮಗೆ ಮತ ಹಾಕಲು ಆಗಲ್ಲ ಅಂದ್ರೆ ಹಾಕಬೇಡಿ. ಬೇಕೆಂದರೆ ಪಾಕಿಸ್ತಾನಿಗಳಾಗಿ. ಹಣ ಹಾಗೂ ಸೇವೆಗೋಸ್ಕರ ನೀವು ಮತ ಹಾಕುತ್ತೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಟ್‌ವೀಲರ್, ಪಿಟ್‌ಬುಲ್ ತಳಿಯ ನಾಯಿಗೆ ಈ ನಗರದಲ್ಲಿ ನಿಷೇಧ – ಉಲ್ಲಂಘಿಸಿದ್ರೆ ದಂಡ

ಇದಕ್ಕೆ ಉತ್ತರಿಸಿದ ವಿದ್ಯಾರ್ಥಿನಿ, ನಾನು ಭಾರತೀಯಳು. ನಾನೇಕೆ ಪಾಕಿಸ್ತಾನಿಯಾಗಬೇಕು? ಎಂದು ಪ್ರಶ್ನಿಸಿದ್ದಾಳೆ. ಈ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಧಿಕಾರಿಯನ್ನು ಜನರು ವ್ಯಾಪಕವಾಗಿ ಟೀಕಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *