ಮುಡಾ ಹಗರಣದ ಲೋಕಾಯುಕ್ತ ವರದಿ ಇಂದು ಹೈಕೋರ್ಟ್‌ಗೆ ಸಲ್ಲಿಕೆ – ಸಿಬಿಐ ಅಂಗಳಕ್ಕೆ ತನಿಖೆ ಶಿಫ್ಟ್?

Public TV
1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕೋರಿದ್ದರು. ಕಳೆದ ವಿಚಾರಣೆಯಲ್ಲಿ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಸೂಚಿಸಿತ್ತು. ಅಲ್ಲದೇ, ತನಿಖಾ ಪ್ರಗತಿ ವರದಿಯನ್ನು ನೀಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.

ಇಂದು ಹೈಕೋರ್ಟ್ಗೆ ತನಿಖಾ ವರದಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳ ವಿಚಾರಣೆಯನ್ನು ಲೋಕಾಯುಕ್ತ ನಡೆಸಿದೆ. ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ವಿಚಾರಣೆ ಆಗಿದೆ.

ಪ್ರಕರಣದಲ್ಲಿ ಅಧಿಕಾರಿಗಳಾದ ಕುಮಾರ್ ನಾಯ್ಕ್, ನಟೇಶ್ ಮತ್ತು ಪಾಲಾಯ್ಯ ವಿಚಾರಣೆ ಆಗಿದೆ. ಬಳಿಕ ಸಾಕ್ಷಿಗಳಿಂದ ಹೇಳಿಕೆಯನ್ನು ಕೂಡ ದಾಖಲಾಗಿದೆ

Share This Article