ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ: ಮಂಗಳೂರು ಮುಸ್ಲಿಮ್ಸ್ ಪೇಜ್

Public TV
1 Min Read

ಮಂಗಳೂರು: “ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇಂದು ಕೊನೆಯ ದಿನ” ಎಂದು ಮಂಗಳೂರು ಮುಸ್ಲಿಮ್ ಹೆಸರಿನಲ್ಲಿರುವ ಫೇಸ್‍ಬುಕ್ ಪೇಜ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಆಗಿದೆ.

ಭಯೋತ್ಪಾದಕ ಕಲ್ಲಡ್ಕ ಪ್ರಭಾಕರ ಭಟ್ಟ ಸತ್ತರೆ ಅವನಿಗೆ ರಾಷ್ಟ್ರ ಧ್ವಜ ಹಾಕಿ ಗೌರವಿಸುತ್ತಿರೋ ಇಲ್ಲಾ ಕೇಸರಿ ಧ್ವಜ ಹಾಕುತ್ತಿರೋ? ಇವತ್ತು ಅವನ ಕೊನೆಯ ದಿನ..ತೀರ್ಮಾನಿಸಿ ಎಂದು ಈ ಎಫ್‍ಬಿ ಪೇಜ್‍ನಲ್ಲಿ ಸ್ಟೇಟಸ್ ಹಾಕಲಾಗಿದೆ.

ಈ ಪೇಜ್ ನಲ್ಲಿ ರಾಜ್ಯಸರ್ಕಾರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಬಂಟ್ವಾಳದಲ್ಲಿ ಪ್ರತಿಭಟನೆ ಮುಂದಾದ ಸಂಘ ಪರಿವಾರದ ವ್ಯಕ್ತಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಲಾಗಿದೆ.

ಪೋಸ್ಟ್ ನಲ್ಲಿ ಏನಿದೆ?
ಕಲಾಯಿ ಅಸ್ರಫ್ ಅವರನ್ನು ಆರ್‍ಎಸ್‍ಎಸ್ ಸಂಘಪರಿವಾರದವರು ಭೀಕರವಾಗಿ ಕೊಲೆ ಮಾಡಿದನ್ನು ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸಲು ತಯಾರಾದಾಗ, ಇಲ್ಲಿ ನಿಷೇಧಾಜ್ಞೆ ಇದೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಪ್ರತಿಭಟನೆಗೆ ಮುಂದಾದರೆ ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಕಾಂಗ್ರೆಸ್ ಸರಕಾರದ ಪೋಲೀಸ್ ಇಲಾಖೆ ಹೇಳಿತ್ತು.

ಈಗ ಏನು ಮಾಡುತ್ತಿದೆ? ಇಷ್ಟು ಸಂಖ್ಯೆಯಲ್ಲಿ ಸಂಘಪರಿವಾರ ದವರು ಪ್ರತಿಭಟನೆಗಾಗಿ ಬಿಸಿ ರೋಡ್ ಬಂದು ಸೇರಲು ಎಲ್ಲಾ ರೀತಿಯ ಸಹಕಾರ ಪೊಲೀಸ್ ಇಲಾಖೆ ಮಾಡುವಂತೆ ಮಾಡಿದ್ದು ಪ್ರಭಾಕರ ಭಟ್ಟನಾ ಇಲ್ಲ? ಉಸ್ತುವಾರಿ ಸಚಿವರಾ? ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಉತ್ತರಿಸಬೇಕು.

ನಿಷೇಧಾಜ್ಞೆ ಯನ್ನು ಲೆಕ್ಕಿಸದೆ ಸರಕಾರಕ್ಕೆ ಕಾನೂನಿಗೆ ಸವಾಲೆಸೆದು ಪ್ರತಿಭಟನೆಗಾಗಿ ಅಲ್ಲಿ ಬಂದು ಸೇರಿದ ಪ್ರತಿಯೊಬ್ಬರ ಮೇಲೂ ಕೇಸು ದಾಖಲಿಸಿ ಜೈಲಿಗೆ ಕಳುಹಿಸುವ ಧೈರ್ಯ ಕಾಂಗ್ರೆಸ್ ಸರಕಾರಕ್ಕೆ ಇದೆಯಾ? ಕಾನೂನು ಕ್ರಮವೆಲ್ಲಾ ಮುಸ್ಲಿಮರ ಮೇಲೆ ಮಾತ್ರ ಪ್ರಯೋಗಿಸಲಿಕ್ಕಾಗಿ ಮಾತ್ರ ಇರುವುದಾ ಕಾಂಗ್ರೆಸ್ ನಾಯಕರೇ ಉತ್ತರಿಸಿ.

ಈ ಪೋಸ್ಟಿಗೆ #ಅಕ್ರವಾಗಿ_ಪ್ರತಿಭಟನೆ_ನಡೆಸಿದ_ಸಂಘಪರಿವಾರದ_ಗೂಂಡಗಳ_ಮೇಲೆ_ಲಾಠಿ_ಬೀಸಲಾಗದ_ಪೋಲಿಸರೇನು_ಗಂಡಸರಲ್ಲವೇ ಎನ್ನುವ ಹ್ಯಾಶ್ ಟ್ಯಾಗ್ ಬಳಸಲಾಗಿದೆ. ಈ ಪೋಸ್ಟಿಗೆ ಸಾಕಷ್ಟು ಪರ ವಿರೋಧ ಪ್ರತಿಕ್ರಿಯೆಗಳು ಬಂದಿದೆ.

 

 

Share This Article
Leave a Comment

Leave a Reply

Your email address will not be published. Required fields are marked *