ಸ್ಕೈವಾಕ್‌ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ – ಡಿಕೆಶಿಗೆ ಸೂರ್ಯ ಪತ್ರ

By
2 Min Read

ಬೆಂಗಳೂರು: ಕೈ  (Congress) ಸರ್ಕಾರದಿಂದ ನಗರದ ಅಭಿವೃದ್ಧಿಗಾಗಿ ದುಡ್ಡು ಬಿಡುಗಡೆ ಮಾಡುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya)  ಡಿಸಿಎಂ ಡಿಕೆ.ಶಿವಕುಮರ್‌ಗೆ  (D.K. Shivakumar) ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ ದುಡ್ಡು ಬಿಡುಗಡೆ ಮಾಡುವಂತೆ ಬಿಜೆಪಿ ನಾಯಕರು ಒತ್ತಡ ನೀಡುತ್ತಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಶಾಸಕ ಮುನಿರತ್ನ ಮನವಿ ಮಾಡಿದ್ದರು. ಈಗ ತೇಜಸ್ವಿ ಸೂರ್ಯ ಡಿಕೆಶಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ:  ಮುಸ್ಲಿಮರಿಗೆ ಉಡುಗೊರೆ, ರೈತರಿಗೆ ಗಾಯದ ಮೇಲೆ ಬರೆ: ಅಶೋಕ್‌ ಕಿಡಿ

ನಗರದ ಸಂಚಾರ ದೃಷಿಯಿಂದ ಬಹುಮುಖ್ಯ ಪ್ರದೇಶವಾಗಿರುವ ಬನಶಂಕರಿಯಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಸಾರ್ವಜನಿಕರ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಇವುಗಳ ಮಧ್ಯೆ ದಿನನಿತ್ಯ ಸಂಚಾರ ಮಾಡುವ ಜನರಿಗಾಗಿ ಸ್ಕೈವಾಕ್‌ ನಿರ್ಮಾಣ ಮಾಡಬೇಕು. ಸ್ಕೈವಾಕ್‌ ನಿರ್ಮಾಣಕ್ಕೆ ಸರ್ಕಾರದಿಂದ ದುಡ್ಡು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿಖಿಲ್ ಮಂಡ್ಯ ಕಣದಿಂದ ಹಿಂದೆ ಸರಿದಿದ್ದೇಕೆ?

ಇದೇ ವಿಚಾರವನ್ನು ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಮತ್ತು ನಿಮ್ಮ ಗಮನಕ್ಕೂ ತಂದಿದ್ದೇನೆ. ಅದಕ್ಕೆ ತಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದೀರಿ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿದ್ದೇನೆ. ಆದರೆ ಕಾಮಗಾರಿ ಬಗ್ಗೆ ಮಾತ್ರ ಇನ್ನೂ ಸ್ಪಷ್ಟನೆ ಇಲ್ಲ. ನಾವು ಅಲ್ಲಿ ಸ್ಕೈವಾಕ್‌ ನಿರ್ಮಿಸುವುದರಿಂದ 50 ಸಾವಿರ ಜನಕ್ಕೆ ಪ್ರಯೋಜನವಾಗಲಿದೆ. ಹೀಗಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಿ ಎಂದು ಡಿಕೆ.ಶಿವಕುಮಾರ್ ಅವರಿಗೆ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

Share This Article