ನಿನ್ನೆ ಸರಸ್ವತಿ ಪೂಜೆ, ಇಂದು ತಾನು ಆಶೀರ್ವಾದ ನೀಡಿದ ತಾಯಿಯನ್ನು ತನ್ನ ಬಳಿಗೆ ಕರೆದೊಯ್ದಿದ್ದಾಳೆ

Public TV
2 Min Read

ನವದೆಹಲಿ: ಭಾರತದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಇಂದು ನಿಧನರಾದರು. ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಲತಾ ಮಂಗೇಶ್ಕರ್‌ ಅವರೊಂದಿಗೆ ಹಲವಾರು ಬಾರಿ ಕೆಲಸ ಮಾಡಿದ ಸಂಗೀತ ಸಂಯೋಜಕ, ಗಾಯಕ ಎ.ಆರ್‌.ರೆಹಮಾನ್‌, ಗಾನ ಕೋಗಿಲೆಯೊಂದಿಗಿನ ಫೋಟೋ ಹಂಚಿಕೊಂಡು ಸಂತಾಪದ ನುಡಿಗಳನ್ನಾಡಿದ್ದಾರೆ. ಪ್ರೀತಿ, ಗೌರವ, ಪ್ರಾರ್ಥನೆಗಳು ಎಂದು ರೆಹಮಾನ್‌ ಟ್ವೀಟ್‌ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

 

View this post on Instagram

 

A post shared by shreyaghoshal (@shreyaghoshal)

ಲತಾ ಮಂಗೇಶ್ಕರ್‌ ಅವರ ಕಪ್ಪು-ಬಿಳುಪಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಗಾಯಕಿ ಶ್ರೇಯಾ ಘೋಷಾಲ್, ʼಮನಸ್ಸಿಗೆ ಘಾಸಿಯಾಯಿತು. ನಿನ್ನೆ ಸರಸ್ವತಿ ಪೂಜೆ. ಇಂದು ತಾಯಿ ತನ್ನ ಆಶೀರ್ವಾದವನ್ನು ತನ್ನೊಂದಿಗೆ ಕರೆದೊಯ್ದಿದ್ದಾಳೆ. ಅದೇಕೋ ಇಂದು ಪಕ್ಷಿಗಳು, ಮರಗಳು, ಗಾಳಿ ಕೂಡ ಮೌನವಾಗಿದೆ ಎನಿಸುತ್ತಿದೆ. ಸ್ವರ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್‌ ಜೀ ನಿಮ್ಮ ದೈವಿಕ ಧ್ವನಿಯು ಶಾಶ್ವತವಾಗಿ ಪ್ರತಿಧ್ವನಿಸುತ್ತದೆ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ. ಓಂ ಶಾಂತಿʼ ವಿಷಾದ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Adnan Sami (@adnansamiworld)

ಸಂಗೀತ ಸಂಯೋಜಕ, ಗಾಯಕ ಅದ್ನಾನ್‌ ಸಾಮಿ, ʻಸಂಗೀತ ಲೋಕ ಇಂದು ಅನಾಥವಾಗಿದೆ. ನಮ್ಮ ಕೋಗಿಲೆ ಹಾರಿಹೋಗಿದೆ. ನಾವು ಕತ್ತಲೆಯಲ್ಲಿ ಧ್ವನಿಯಿಲ್ಲದೇ ಬಿದ್ದಿದ್ದೇವೆ. ನಾವು ಅವರನ್ನು ಕಳೆದುಕೊಂಡಿದ್ದೇವೆ. ಆದರೂ ನಾವು ಅವರ ಜೀವಿತಾವಧಿಯಲ್ಲಿ ಇದ್ದೆವು. ಅವರು ಉಸಿರಾಡಿದ ಗಾಳಿಯನ್ನು ನಾವು ಉಸಿರಾಡುತ್ತಿರುವುದು ನಮ್ಮ ಸೌಭಾಗ್ಯ. ಧನ್ಯವಾದಗಳು ಪ್ರಿಯ ದೀದಿʼ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

 

View this post on Instagram

 

A post shared by Shaan Mukherji (@singer_shaan)

ಲತಾ ಮಂಗೇಶ್ಕರ್‌ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ಗಾಯಕ ಸುರೇಶ್‌ ವಾಡ್ಕರ್‌, ನಮ್ಮ ತಾಯಿ ಸರಸ್ವತಿ ತನ್ನ ಲೋಕಕ್ಕೆ ಮರಳಿದರು. ಅವರ ಧ್ವನಿಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತಾರೆ ಎಂದು ಗಾಯಕ ಸುರೇಶ್‌ ವಾಡ್ಕರ್‌ ಸಂತಾಪ ಸೂಚಿಸಿದ್ದಾರೆ.

ಮಂಗೇಶ್ಕರ್‌ ಅವರ ಫೋಟೋವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿರುವ ಗಾಯಕಿ ಲಿಸಾ ಮಿಶ್ರಾ, ನನ್ನ ಬಾಲ್ಯದ ಮನೆಯ ಪ್ರತಿಯೊಂದು ಕೋಣೆಯಲ್ಲೂ ನನ್ನ ತಾಯಿ, ಲತಾ ಜೀ ಅವರ ಹಾಡುಗಳನ್ನು ಹಾಡಿದ್ದ ನೆನಪುಗಳಿವೆ. ಆ ಹಾಡುಗಳು ನನ್ನನ್ನು ಹಾಡುವಂತೆ ಮಾಡಿದವು. ಅವರ ಧ್ವನಿ ನನಗೆ ಸಿಕ್ಕಿತು ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಲತಾ ಮಂಗೇಶ್ಕರ್‌ ಅವರಂತೆ ಇರಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಾಯಕ ನೇಹಾ ಕಕ್ಕರ್‌ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *