ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದ್ರೆ ಉನ್ನತ ಶಿಕ್ಷಣ ವ್ಯವಸ್ಥೆ ಅಪ್‌ಗ್ರೇಡ್ ಆಗ್ಬೇಕು: ಹೆಚ್‌ಆರ್ ರಂಗನಾಥ್

Public TV
1 Min Read

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಅಂದರೆ ಉನ್ನತ ಶಿಕ್ಷಣ (Higher Education) ವ್ಯವಸ್ಥೆ ಅಪ್‌ಗ್ರೇಡ್ ಆಗಬೇಕು ಎಂದು ‘ಪಬ್ಲಿಕ್ ಟಿವಿ’ (PUBLiC TV) ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್ (HR Ranganath) ತಿಳಿಸಿದರು.

ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ 4ನೇ ಆವೃತ್ತಿಯ ವಿದ್ಯಾಮಂದಿರ (Vidhya Mandira) ಸ್ನಾತ್ತಕೋತ್ತರ ಶೈಕ್ಷಣಿಕ ಮೇಳ (PG Education Expo) ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡುವ ಕೆಲಸ ಆಗಬೇಕಿದೆ. ಉನ್ನತ ಶಿಕ್ಷಣ ವ್ಯವಸ್ಥೆಯ ಮೂಲಸೌಕರ್ಯದಲ್ಲಿ ಭಾರತ ಸುಧಾರಿಸಿದೆ. ಆದರೆ, ಪಠ್ಯಕ್ರಮ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಅಪ್‌ಗ್ರೇಡ್ ಆಗಬೇಕು. ಯೂರೋಪ್, ಚೀನಾ ಶಿಕ್ಷಣ ವ್ಯವಸ್ಥೆ ಬಗ್ಗೆ ವಿಚಾರಣೆ ಹೆಚ್ಚಾಗುತ್ತಿದೆ. ಅದೇ ರೀತಿ ಭಾರತದ ಶಿಕ್ಷಣ ವ್ಯವಸ್ಥೆಯನ್ನೂ ವಿಚಾರಿಸುವಂತಾಗಬೇಕು ಎಂದರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

ಯಾವುದೇ ಒಂದು ಕೋರ್ಸ್ ಆಯ್ಕೆ ಮಾಡುವುದು ದೊಡ್ಡದಲ್ಲ, ಅದನ್ನು ಓದುವುದು ಮುಖ್ಯ. ನಮ್ಮಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಇದೆ. ಆದರೆ ಅದನ್ನು ನಾವು ಅಪ್‌ಗ್ರೇಡ್ ಮಾಡಬೇಕು. ಭಾರತ ಜಾಗತಿಕ ಮಟ್ಟದಲ್ಲಿ ಶಿಕ್ಷಣ ನೀಡಲು ಅರ್ಹವಾಗಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಮಕ್ಕಳು ಉತ್ತಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಮೂಲ ವೃಂದಾವನಕ್ಕೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

Share This Article