ಪ್ರತಿಷ್ಠಿತ ಹೋಟೆಲ್ ನಲ್ಲಿ ಯುವರಾಜ ಚಿತ್ರದ ಟೈಟಲ್ ಲಾಂಚ್: ಯಾರೆಲ್ಲ ಗೆಸ್ಟ್?

Public TV
2 Min Read

ಯುವರಾಜಕುಮಾರ್ (Yuva Rajkumar) ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ (Santosh Anand Ram) ಕಾಂಬಿನೇಷನ್ ನ ಮೊದಲ ಸಿನಿಮಾದ ಟೈಟಲ್ (Title) ಲಾಂಚ್ ಟೀಸರ್ ಇಂದು ರಿಲೀಸ್ ಆಗುತ್ತಿದೆ. ಸಂಜೆ ಸಿನಿಮಾದ ಮುಹೂರ್ತ ಮುಗಿಸಿಕೊಂಡು ನಂತರ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಖಾಸಗಿಯಾಗಿ ಟೀಸರ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಅಭಿಮಾನಿಗಳಿಗೆ ಎರಡು ಕಡೆ ಟೈಟಲ್ ಟೀಸರ್ ನೋಡಲು ಅವಕಾಶ ಕಲ್ಪಿಸಲಾಗಿದ್ದು, ಚಿತ್ರತಂಡಕ್ಕೆ ಮತ್ತು ಡಾ.ರಾಜ್ ಕುಟುಂಬಕ್ಕಾಗಿ ಹೋಟೆಲ್ ವೊಂದರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್,  ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬವೇ ಸೇರಲಿದೆ. ಅಲ್ಲದೇ, ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ರಮ್ಯಾ ಕೂಡ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಚಿತ್ರತಂಡದ ಸದಸ್ಯರು, ಹೊಂಬಾಳೆ ಫಿಲ್ಮ್ಸ್ ಸಿಬ್ಬಂದಿ ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ದೊಡ್ಮನೆ ಕುಟುಂಬದ ಕುಡಿ ಯುವರಾಜಕುಮಾರ್ ನಟನೆಯ ಹೊಸ ಸಿನಿಮಾದ ಮುಹೂರ್ತ ಇಂದು ಸಂಜೆ 5 ಗಂಟೆಗೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸಿಂಪಲ್ ಆಗಿ ನಡೆಯಲಿದೆ. ಆದರೆ, ಟೀಸರ್ ರಿಲೀಸ್ ಮಾತ್ರ ಅದ್ಧೂರಿಯಾಗಿ ಮಾಡುವುದಾಗಿ ಡಾ.ರಾಜ್ ಕುಟುಂಬದ ಅಭಿಮಾನಿಗಳು ಸದಸ್ಯರು ತಿಳಿಸಿದ್ದಾರೆ. ಹೊಸ ಸಿನಿಮಾದ ಮುಹೂರ್ತದ ನಂತರ ಟೀಸರ್ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದು, ಬೆಂಗಳೂರಿನ ಜೆ.ಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಸಂಜೆ 6.55ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಜೊತೆಗೆ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಲಿದೆ.  ಅಲ್ಲದೇ, ಕುರುಬರಹಳ್ಳಿಯ ಡಾ.ರಾಜ್ ಪ್ರತಿಮೆಯ ಮುಂದೆಯೇ ಟೀಸರ್ ತೋರಿಸಲಾಗುತ್ತಿದೆ.  ಇದನ್ನೂ ಓದಿ: ಸದ್ದಿಲ್ಲದೇ ʻಟೋಬಿʼ ಚಿತ್ರದ ಶೂಟಿಂಗ್‌ ಮುಗಿಸಿದ ರಾಜ್‌ ಬಿ ಶೆಟ್ಟಿ

ಈ ಹಿಂದೆ ಸಿನಿಮಾದ ಟೀಸರ್ ಮತ್ತು ಟೈಟಲ್ ಲಾಂಚ್ ಅನ್ನು ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅಪ್ಪು ಹುಟ್ಟುಹಬ್ಬ 15 ದಿನ ಬಾಕಿ ಇರುವಾಗಲೇ ನಾಳೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕಾರಣ ಅಂದು ಪುನೀತ್ ಪತ್ನಿ ಅಶ್ವಿನಿ ಅವರು ಲಭ್ಯವಿಲ್ಲ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಈ ಕಾರಣದಿಂದಾಗಿ ಮಾರ್ಚ್ 3ಕ್ಕೆ ಮುಹೂರ್ತ, ಟೈಟಲ್ ಮತ್ತು ಟೀಸರ್ ಲಾಂಚ್ ಮಾಡಲು ಸಂಸ್ಥೆ ಮುಂದೆ ಬಂದಿದೆಯಂತೆ.

ಈ ಸಿನಿಮಾ ಮೂಲಕ ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಯುವರಾಜಕುಮಾರ್ ಅಧಿಕೃತವಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರಲಿದೆ.  ಪುನೀತ್ ರಾಜಕುಮಾರ್ ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಅವರ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ನುರಿತ ತಂತ್ರಜ್ಞರ ತಂಡವೇ ಸಿನಿಮಾದಲ್ಲಿದೆ.

Yuvaraj Kumar

ಅಂದುಕೊಂಡಂತೆ ಆಗಿದ್ದರೆ ಯುವರಾಜಕುಮಾರ್ ಈ ಹಿಂದೆಯೇ ಲಾಂಚ್ ಆಗಬೇಕಿತ್ತು. ಯುವಗಾಗಿಯೇ ‘ಯುವ ರಣಧೀರ ಕಂಠೀರವ’ ಸಿನಿಮಾ ಮಾಡಲು ಹೊರಟಿದ್ದರು ಜಾಕಿ ತಿಮ್ಮಯ್ಯ. ಸಾಕಷ್ಟು ಹಣ ಖರ್ಚು ಮಾಡಿ ಟೀಸರ್ ಕೂಡ ರಿಲೀಸ್ ಮಾಡಿದ್ದರು. ಆದರೆ, ಆ ಸಿನಿಮಾ ಮುಂದುವರೆಯಲಿಲ್ಲ. ಈ ಕಾರಣದಿಂದಾಗಿ ಸಂತೋಷ್ ಆನಂದ್ ರಾವ್ ಅವರ ಚಿತ್ರವೇ ಯುವ ನಟನೆಯ ಚೊಚ್ಚಲು ಸಿನಿಮಾವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *