ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ

Public TV
2 Min Read

ನ್ನಡದ ಸೆನ್ಸಿಬಲ್ ನಾಯಕ ಎಂದೇ ಖ್ಯಾತರಾಗಿರುವ ಹೆಸರಾಂತ ನಟ ನೀನಾಸಂ ಸತೀಶ್, ಅಭಿಮಾನಿಗಳಿಗೆ ಹೊಸದೊಂದು ಸುದ್ದಿ ಕೊಟ್ಟಿದ್ದಾರೆ. ಇದೇ ಮೇ 15ರಂದು ಅವರು ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊಸ ಸಿನಿಮಾದ ಟೈಟಲ್ ಲಾಂಚ್ ಆಮಂತ್ರಣ ಪತ್ರಿಕೆಯಲ್ಲಿ ರಕ್ತದಲ್ಲಿ ಮಿಂದೆದ್ದ ಬ್ಲೇಡ್ ಅನ್ನು ಬಳಸಿಕೊಂಡಿದ್ದು, ಇದು ರಕ್ತಸಿಕ್ತ ಅಧ್ಯಾಯದ ಕುರುಹು ಇರಬಹುದಾ? ಎನ್ನುವ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ : ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗೆ ಧೋನಿ ಸಿನಿ ರಂಗಕ್ಕೆ ಎಂಟ್ರಿ

ಇದೇ ಪೋಸ್ಟರ್ ನಲ್ಲಿಯೇ ‘ಎಲ್ಲಾ ಯುದ್ಧಗಳು, ಯುದ್ಧ ಭೂಮಿಯಲ್ಲೇ ನಡೆಯೊಲ್ಲ’ ಎನ್ನುವ ಟ್ಯಾಗ್ ಲೈನ್ ಕೂಡ ಬರೆದಿದ್ದು, ಅದು ಮನುಕುಲದ ಮಧ್ಯ ನಡೆದ ಯುದ್ಧದ ಕಥೆಯಾ ಎಂಬ ಪ್ರಶ್ನೆ ಕೂಡ ಮೂಡುವಂತೆ ಮಾಡಿದ್ದಾರೆ. ಬ್ಲೇಡ್ ಮತ್ತು ರಕ್ತ ಹಾಗೂ ಯುದ್ಧ ಪದಗಳ ಬಳಕೆಯಿಂದಾಗಿ ಈ ಸಿನಿಮಾ ಯಾವುದರ ಸುತ್ತ ಹೆಣೆದಿರುವ ಕಥೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಮೇ15 ರಂದು ನಡೆಯಲಿರುವ ಮುಹೂರ್ತ ಮತ್ತು ಟೈಟಲ್ ಲಾಂಚ್ ದಿನ ಈ ಕುರಿತು ಒಂದಷ್ಟು ಮಾಹಿತಿ ಸಿಗಬಹುದು. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

ಈ ಸಿನಿಮಾದ ವಿಶೇಷ ಅಂದರೆ, ವೃದ್ಧಿ ಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ವಿನೋದ್ ದೋಂಡಾಳೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸತೀಶ್ ಯಾವ ರೀತಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವುದು ಕುತೂಹಲ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ ಸತೀಶ್, ‘ಸಿನಿಮಾದ ಟೈಟಲ್ ತುಂಬಾ ವಿಶೇಷವಾಗಿದೆ. ಅಲ್ಲದೇ, ನಮ್ಮದೇ ನೆಲದ ಕಥೆಯನ್ನು ಹೇಳುತ್ತಿದ್ದೇವೆ. ಈವರೆಗೂ ನಿರ್ವಹಿಸದೇ ಇರುವ ಪಾತ್ರ ಅದಾಗಿದೆ. ಈ ಸಿನಿಮಾಗಾಗಿ ಲುಕ್ ಕೂಡ ಬದಲಾಗಲಿದೆ. ಈಗಲೇ ಸಿನಿಮಾದ ಬಗ್ಗೆ ಮಾತನಾಡುವುದು ಸರಿಯಾದದ್ದು ಅಲ್ಲ. ತೆರೆಯ ಮೇಲೆಯೇ ಕಥೆ ಮತ್ತು ಪಾತ್ರಗಳು ಪರಿಚಯವಾಗಲಿ’ ಎಂದರು. ಇದನ್ನೂ ಓದಿ : ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

ಈವರೆಗೂ ಕನ್ನಡದಲ್ಲಿ ನಾನಾ ರೀತಿಯ ಕಥೆಗಳು ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಇಂಥದ್ದೊಂದು ಕಥೆಯು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವುದು ಸಿನಿಮಾಗಳ ವಿಶೇಷಗಳಲ್ಲಿ ಒಂದು. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಕಥೆಯನ್ನು ಹೇಳುತ್ತಿರುವುದಾಗಿ ಸಿನಿಮಾ ತಂಡದಿಂದ ಬಂದ ಮಾಹಿತಿ. ಹಾಗಾಗಿ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾನಾ? ಎನ್ನುವುದಕ್ಕೆ ಚಿತ್ರತಂಡವೇ ಉತ್ತರ ಕೊಡಬೇಕಿದೆ.

ಪ್ಯಾನ್ ಇಂಡಿಯಾ ಸಿನಿಮಾ?

ಸಿನಿಮಾ ತಂಡದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸುಮಾರು 20 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ಮೂಡಿ ಬರಲಿದೆಯಂತೆ. ಭಾರೀ ಬಜೆಟ್ ಬೇಡುವಂತಹ ದೃಶ್ಯಗಳು ಸಿನಿಮಾದಲ್ಲಿ ಇರಲಿದ್ದು, ಯುದ್ಧ ಸನ್ನಿವೇಶವನ್ನು ಕ್ರಿಯೇಟ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಕೂಡ ಇದೆ.

Share This Article
Leave a Comment

Leave a Reply

Your email address will not be published. Required fields are marked *