ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `K47′ (ಕಿಚ್ಚ 47) ಹೆಸರಿನಲ್ಲಿ ಚಿತ್ರೀಕರಣವಾಗುತ್ತಿರುವ ಕಿಚ್ಚನ ಸಿನಿಮಾಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ.
ಯೆಸ್. ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ಸ್ಟಾರ್ ಸಿನಿಮಾಗಳಿಗೆ (Cinema) ಕಿಚ್ಚ ಸುದೀಪ್ ಠಕ್ಕರ್ ಕೊಡುತ್ತಾರೆ ಅಂತ ಹೇಳಲಾಗಿತ್ತು. ಅದೀಗ ನಿಜವಾಗಿದೆ. ಕಿಚ್ಚ ಸುದೀಪ್ ಈ ವರ್ಷ ತಾವು ಅಂದುಕೊಂಡಂತೆ ಒಂದು ಸಿನಿಮಾವನ್ನ ತಮ್ಮ ಅಭಿಮಾನಿಗಳಿಗೆ ದರ್ಶನ ಮಾಡಿಸಲು ಶಪಥ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 25ರಂದು ತೆರೆಕಂಡ ಮ್ಯಾಕ್ಸ್ ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದನ್ನೂ ಓದಿ: `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್ ಹೀಗಂದಿದ್ಯಾಕೆ?
ಹೀಗಾಗಿ ಈ ವರ್ಷವೂ ಡಿಸೆಂಬರ್‌ಗೆ ಸುದೀಪ್ ಅವರ ಹೊಸ ಚಿತ್ರ ತೆರೆಗೆ ಬರಲಿದ್ದು, ʻಮಾರ್ಕ್ʼ (MARK) ಅಂತ ಹೆಸರಿಡಲಾಗಿದೆ. ಮ್ಯಾಕ್ಸ್ ಚಿತ್ರತಂಡದ ಜೊತೆಗಿನ 2ನೇ ಸಿನಿಮಾ ಇದಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರಲಿದೆ. ಹೊಸ ಚಿತ್ರದ ಟೈಟಲ್ ಟೀಸರ್ ಕೂಡ ರಿಲೀಸ್ ಆಗಿದ್ದು, ಖದರ್ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದನ್ನೂ ಓದಿ: ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್ ಬಗ್ಗೆ ಕಿಚ್ಚನ ಮಾತು
52ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ
ಕಿಚ್ಚ ಸುದೀಪ್ ನಾಳೆ 52ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಮಾಧ್ಯಮದ ಜೊತೆ ಸುದ್ದಿಗೋಷ್ಠಿ ನಡೆಸಿರುವ ಸುದೀಪ್ ಒಂದಷ್ಟು ಪ್ರಸ್ತುತ ವಿಚಾರಗಳ ಕುರಿತು ಮಾತನಾಡಿದ್ರು. ರಾಜಕೀಯಕ್ಕೆ ಬರೋದ್ರ ಕುರಿತು, ದರ್ಶನ್ ಹಾಗೂ ತಮ್ಮ ನಡುವಿನ ಸ್ನೇಹ ಮತ್ತೆ ಬೆಸೆಯುತ್ತಾ ಅನ್ನುವ ಪ್ರಶ್ನೆಗಳಿಗೆಲ್ಲ ಮಾರ್ಮಿಕವಾಗಿ ಕಿಚ್ಚ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಓಪನ್ ಹಾರ್ಟ್
ಪ್ರತಿ ಹುಟ್ಟುಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಿಗುವ ವಾಡಿಕೆ ಇಟ್ಕೊಂಡಿದ್ದಾರೆ ಕಿಚ್ಚ. ಜಾಸ್ತಿ ಜನ ಸೇರೋದ್ರಿಂದ ಮನೆಯ ಮುಂದಿನ ದಾರಿ ಚಿಕ್ಕದಾಗಿರೋದ್ರಿಂದ ಮನೆಯ ಬದಲು ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳನ್ನ ಭೇಟಿಯಾಗುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಒಂದಿನ ಮುಂಚಿತವಾಗೇ ಸಿಗುತ್ತಿದ್ದಾರೆ ಸುದೀಪ್. ಅದಕ್ಕೂ ಮುನ್ನವೇ ಮಾಧ್ಯಮಗೋಷ್ಠಿ ಕರೆದು ಒಂದಷ್ಟು ವಿಷಯಗಳನ್ನ ಸುದೀಪ್ ಹಂಚಿಕೊಂಡ್ರು.
ಕಿಚ್ಚ ಸುದೀಪ್ ಅಭಿನಯದ ಕೆ47 ಚಿತ್ರ ಇದೇ ಡಿಸೆಂಬರ್ 25ಕ್ಕೆ ತೆರೆಕಾಣುತ್ತಿದೆ. ಇದೇ ತಿಂಗಳು ದರ್ಶನ್ ಅಭಿನಯಿಸಿರುವ ಡೆವಿಲ್ ಸಿನಿಮಾ ಕೂಡ ರಿಲೀಸ್ ಘೊಷಣೆಯಾಗಿದ್ದು ಕ್ಲ್ಯಾಶ್ ಆಗುತ್ತಾ ಎಂಬ ಪ್ರಶ್ನೆಗೆ ಸುದೀಪ್ ನೇರವಾಗೇ ಉತ್ತರಿಸಿದ್ದಾರೆ. ಡೆವಿಲ್ ಚಿತ್ರಕ್ಕೆ ಒಳ್ಳೆಯದಾಗ್ಲಿ. ಕ್ಲ್ಯಾಶ್ ಏನೂ ಇಲ್ಲ. ಅವರ ಪಾಡಿಗೆ ಅವರು ಬರ್ತಾರೆ ನಾವು ನಮ್ಮ ಪಾಡಿಗೆ ಬರ್ತೀವಿ ಎಂದಿದ್ದಾರೆ. ಜೊತೆಗೆ ಸದ್ಯದ ದರ್ಶನ್ ಸ್ಥಿತಿ ಬಗ್ಗೆ ಬೇಸರ ಇದೆ. ಆದರೆ ಕಾನೂನಿನಡಿ ಇರೋದ್ರಿಂದ ನಾನು ಮಾತನಾಡಿದ್ರೆ ತಪ್ಪಾಗುತ್ತೆ. ಅವರನ್ನ ಇಷ್ಟ ಪಡುವ ಅಭಿಮಾನಿ ಬಳಗದ ನಂಬಿಕೆಗೂ ಬೇಸರ ಮಾಡಿದಂತಾಗುತ್ತೆ ಅಂದಿದ್ದಾರೆ ಸುದೀಪ್.