‘ಟೈಟಾನಿಕ್’ ಕ್ಯಾಪ್ಟನ್ ಖ್ಯಾತಿಯ ನಟ ಬರ್ನಾರ್ಡ್ ನಿಧನ

Public TV
1 Min Read

ಗತ್ತಿನ ಶ್ರೇಷ್ಠ ಸಿನಿಮಾಗಳಲ್ಲಿ ಒಂದಾದ, ಹಾಲಿವುಡ್ ನ ಅತ್ಯಂತ ಜನಪ್ರಿಯ ಸಿನಿಮಾ ಟೈಟಾನಿಕ್ (Titanic) ನ ಕ್ಯಾಪ್ಟನ್ ನಟ ಬರ್ನಾರ್ಡ್ (Bernard Hill) ನಿಧನರಾಗಿದ್ದಾರೆ (Passed away). 79ರ ವಯಸ್ಸಿನ ಈ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

ಕೇಟ್ ವಿನ್ಸ್ ಲೆಟ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಬರ್ನಾರ್ಡ್ ಈವರೆಗೂ ಸುಮಾರು 11 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಲಿವುಡ್ ನಲ್ಲಿ ವಿವಿಧ ಪಾತ್ರಗಳನ್ನು ಮಾಡಿರುವ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರಾಗಿದ್ದಾರೆ.

 

ಬರ್ನಾರ್ಡ್ ನಿಧನಕ್ಕೆ ಕೇವಲ ಹಾಲಿವುಡ್ ಮಾತ್ರವಲ್ಲ, ಜಗತ್ತಿನ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಮತ್ತು ಅಭಿಮಾನಿಗಳ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Share This Article