ತಿರುಪತಿ: ತಿರುಮಲದ ವೆಂಕಟೇಶ್ವರ ದೇವಸ್ಥಾನದ (Tirupati) ಹುಂಡಿಯಲ್ಲಿ ಸೋಮವಾರ ಒಂದೇ ದಿನ 5.3 ಕೋಟಿ ರೂ. ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.
ಭಕ್ತರ ಸಂಖ್ಯೆ ಸಾಧಾರಣವಾಗಿದ್ದರೂ ಸಹ ಇದು ಕಳೆದ ಒಂದು ವರ್ಷದಲ್ಲಿ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚು ಕಾಣಿಕೆಯಾಗಿದೆ. ಸೋಮವಾರ ತಿರುಮಲ ದೇವಸ್ಥಾನದಲ್ಲಿ 78,730 ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ಇದು ಸಾಮಾನ್ಯವಾಗಿ ಹಬ್ಬ ಹರಿದಿನಗಳು ಮತ್ತು ಬೇಸಿಗೆ ಕಾಲದಲ್ಲಿ ದಾಖಲಾಗುವ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾತ್ರಾರ್ಥಿಗಳ ಸಂಖ್ಯೆಗಿಂತ ಕಡಿಮೆಯಾಗಿದೆ. ಇದನ್ನೂ ಓದಿ: ಜೈಸ್ವಾಲ್ ಅರ್ಧಶತಕ – ಶತಕ ಸಿಡಿಸಿ ಕೊಹ್ಲಿ ಸಾಧನೆ ಸರಿಗಟ್ಟಿದ ಗಿಲ್
ಸಾಮಾನ್ಯ ಜನದಟ್ಟಣೆಯ ಹೊರತಾಗಿಯೂ, ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಹುಂಡಿಗೆ 5.3 ಕೋಟಿ ರೂ. ಕಾಣಿಕೆ ಹರಿದುಬಂದಿದೆ. ಇದು ಇದುವರೆಗಿನ ವರ್ಷದ ಅತ್ಯಧಿಕ ಕಾಣಿಕೆಯಾಗಿದೆ.
2023ರ ಜನವರಿ 2 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಕಾಣಿಕೆ ಸಂಗ್ರಹವಾಗಿತ್ತು. ಆ ದಿನ ದೇವಾಲಯಕ್ಕೆ 7.68 ಕೋಟಿ ರೂ. ಒಂದೇ ದಿನದಲ್ಲಿ ಹರಿದುಬಂದಿತ್ತು. ಹಿಂದೆಯೂ 6 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿರುವ ನಿದರ್ಶನ ಇದೆ. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್
ಸಂಪತ್ತಿಗೆ ಹೆಸರುವಾಸಿಯಾದ ತಿರುಪತಿಗೆ ಪ್ರತಿ ತಿಂಗಳು 100 ಕೋಟಿಯಿಂದ 140 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗುತ್ತಿದೆ. ಸುಮಾರು 100 ಕೆಜಿಯಿಂದ 140 ಕೆಜಿ ಚಿನ್ನವನ್ನು ಭಕ್ತರಿಂದ ದೇಣಿಗೆಯಾಗಿ ಪಡೆಯಲಾಗುತ್ತದೆ. ಬ್ಯಾಂಕುಗಳಲ್ಲಿ ಟಿಟಿಡಿಯ ಸ್ಥಿರ ಠೇವಣಿಗಳ ಮೊತ್ತ 20,000 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚು.