ತಿರುಪತಿ ದೇವಸ್ಥಾನದ ದೈನಂದಿನ ವ್ಯವಹಾರಗಳನ್ನು ಗಮನಿಸಲು ಸಾಧ್ಯವಿಲ್ಲ – ಸುಪ್ರೀಂಕೋರ್ಟ್

Public TV
1 Min Read

ನವದೆಹಲಿ: ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅರ್ಚನೆ ಮತ್ತು ಪೂಜೆಯಲ್ಲಿ ಅಕ್ರಮ ನಡೆಯುತ್ತಿದ್ದು ಈ ಸಂಬಂಧ ವಿಚಾರಣೆ ನಡೆಸುವಂತೆ ಭಕ್ತರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಆಂಧ್ರಪ್ರದೇಶ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ, ಕೋರ್ಟ್ ದೇವಾಲಯದ ದೈನಂದಿನ ವ್ಯವಹಾರಗಳನ್ನು ಗಮನಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

ಅಭಿಷೇಕ ಪ್ರಕ್ರಿಯೆಗಳನ್ನು ಸಂಪ್ರದಾಯಿಕವಾಗಿ ಅನುಸರಿಸಬೇಕು ಎಂದು ಭಕ್ತ ಶ್ರೀವಾರಿ ದಾದಾ ಕೋರಿದ್ದರು. ವಿಚಾರಣೆ ವೇಳೆ ಮು.ನ್ಯಾ ಎನ್.ವಿ ರಮಣ ಭಕ್ತರಿಗೆ ಏಕೆ ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಟಿಡಿ ಪರ ಅರ್ಜಿದಾರರ ಪ್ರತಿಯೊಂದು ಕುಂದುಕೊರತೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರತಿ-ಅಫಿಡವಿಟ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಸ್ಪಷ್ಟನೆಗಳನ್ನು ನೇರವಾಗಿ ಭಕ್ತರಿಗೆ ನೀಡಬೇಕು, ಕೋರ್ಟ್ ಇವುಗಳನ್ನು ಆದೇಶಿಸಲು ಸಾಧ್ಯವಿಲ್ಲ, ದೇವಸ್ಥಾನದ ವ್ಯವಹಾರಗಳನ್ನು ಗಮನಿಸಲು ಸಾಧ್ಯವಿಲ್ಲ ಎಂದಿತು. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ದೇವಸ್ಥಾನದ ವಿಚಾರಗಳಲ್ಲಿ ಏನೇ ಸಮಸ್ಯೆಗಳು ಕಂಡು ಬಂದರು ಅದನ್ನು ಭಕ್ತರು ಕೇಳಬಹುದಾಗಿದ್ದು ಅದಕ್ಕೆ ಟಿಟಿಡಿ ಸ್ಪಷ್ಟನೆ ನೀಡಬೇಕು ಅಂತಯೇ ಈ ಅರ್ಜಿದಾರರ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು ಎಂದ ಪೀಠ ಅರ್ಜಿಯನ್ನು ತಿರಸ್ಕರಿಸಿತು. ಈ ಅರ್ಜಿ ಆಂಧ್ರಪ್ರದೇಶ ಹೈಕೋರ್ಟ್‍ನಲ್ಲೂ ತಿರಸ್ಕೃತಗೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *