ಬ್ರಿಟಿಷರ ವಿರುದ್ಧ ಹೋರಾಡಿದರನ್ನು ಕಂಡ್ರೆ ಬಿಜೆಪಿಯವರಿಗೆ ಆಗಲ್ಲ: ಬಿ.ಕೆ.ಹರಿಪ್ರಸಾದ್

Public TV
1 Min Read

ನವದೆಹಲಿ: ಬ್ರಿಟಿಷರ ವಿರುದ್ಧ ದೇಶದ ಪರವಾಗಿ ಹೋರಾಟ ಮಾಡಿವಂತಹ ವ್ಯಕ್ತಿಗಳನ್ನು ಕಂಡರೆ ಬಿಜೆಪಿಗೆ ಆಗುವುದಿಲ್ಲ ಎಂದು ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕುರಿತು ಮಾತನಾಡಿದ ಅವರು, ಬಿಜೆಪಿ ವಿರೋಧ ವ್ಯಕ್ತಪಡಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ ಟಿಪ್ಪು ಸುಲ್ತಾನ್ ತನ್ನ ಸ್ವಂತ ಮಕ್ಕಳನ್ನು ಅಡವಿಟ್ಟು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಆದರೆ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಬ್ರಿಟಿಷರ ಪರವಾಗಿದ್ದಾರೆ. ಆದ್ದರಿಂದಲೇ ಸಹಜವಾಗಿ ಟಿಪ್ಪುವನ್ನು ವಿರೋಧ ಮಾಡುತ್ತಿದ್ದಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಜನರಲ್ಲಿ ದ್ವೇಷದ ಭಾವನೆಯನ್ನು ಸೃಷ್ಟಿಸುತ್ತಿರುವುದು ಸರಿಯಿಲ್ಲ ಎಂದು ಕಿಡಿಕಾರಿದರು.

ಮಾತನ್ನು ಮುಂದುವರಿಸಿ, ಟಿಪ್ಪು ಜಯಂತಿ ಆಚರಣೆ ಮಾಡಲು ಜನರ ವಿರೋಧವಿಲ್ಲ. ಅಂದು ದೇಶಕ್ಕೆ ಸ್ವಾತಂತ್ರ್ಯವೇ ಸಿಗಬಾರದು ಎಂದು ಬಿಜೆಪಿಯವರು ಪ್ರಯತ್ನಿಸಿದ್ದರು. ಆದರೆ ಸರ್ಕಾರ ತನ್ನ ನೀತಿಗೆ ಬದ್ಧವಾಗಿರುತ್ತದೆ. ಭಾರತದ ಇತಿಹಾಸದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ನಾಯಕತ್ವ ವಹಿಸಿಕೊಂಡ ಮುಸ್ಲಿಂ ರಾಜನಾದ ಬಹದ್ದೂರ್ ಶಾ ಜಾಫರ್ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಪ್ರಧಾನಿ ಮೋದಿಯವರು ಬರ್ಮಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಜಾರ್‍ಗೆ ತೆರಳಿ ಅವರ ಸಮಾಧಿಗೆ ನಮಸ್ಕರಿಸಿ ಬರುತ್ತಾರೆ. ಆದರೆ ಬಿಜೆಪಿ ನಾಯಕರು ಈಗ ವೋಟಿಗಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆಯವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಸಂಪ್ರದಾಯದಂತೆ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕುತ್ತೇವೆ. ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಅವರ ವೈಯಕ್ತಿಕ ವಿಚಾರ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *