ಮಂಡ್ಯ: ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರಪಾತಕ್ಕೆ ಟಿಪ್ಪರ್ (Tipper) ಬಿದ್ದ ಪರಿಣಾಮ ಸ್ಥಳದಲ್ಲಿ ಟಿಪ್ಪರ್ ಚಾಲಕ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜಟಕ ಗೇಟ್ ಬಳಿಯ ಕ್ವಾರೆಯೊಂದರಲ್ಲಿ ಜರುಗಿದೆ.
ರವಿ ಹಾಗೂ ಕಾಂತ ಎಂಬುವವರು ಸೇರಿ ಕ್ವಾರೆ ನಡೆಸುತ್ತಿದ್ದರು. ಗಣಿಗಾರಿಕೆ (Mining) ಮಾಡಿ ಆ ಸ್ಥಳ ಪ್ರಪಾತದಂತೆ ಆಗಿತ್ತು. ನಿನ್ನೆ ಮಧ್ಯರಾತ್ರಿ ಟಿಪ್ಪರ್ ಚಲಿಸುವ ವೇಳೆ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತದಲ್ಲಿ ನೀರು ಇದ್ದ ಕಾರಣ ಟಿಪ್ಪರ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದನ್ನೂ ಓದಿ: ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಿಲ್ಲ: ಹೆಚ್‌ಡಿಡಿ
ಈ ವೇಳೆ ಚಾಲಕ ಲಕ್ಷ್ಮಣ್ ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬಳಿಕ ಅಗ್ನಿಶಾಮದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ಲಕ್ಷ್ಮಣ್ ಮೃತ ದೇಹವನ್ನು ಮೇಲೆತ್ತಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಇದನ್ನೂ ಓದಿ: ಕತ್ತು ಸೀಳಿ ಸ್ಟಾಫ್ ನರ್ಸ್ ಹತ್ಯೆ; ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದಕ್ಕೆ ಪ್ರಿಯಕರನಿಂದ ಕೊಲೆ



