ಬಿಹಾರದಲ್ಲಿ ಆರ್ಕೆಸ್ಟ್ರಾ ನಡೆಯುತ್ತಿದ್ದ ವೇಳೆ ಕುಸಿದ ಟಿನ್ ಶೆಡ್ – ನೂರಾರು ಜನರಿಗೆ ಗಾಯ, 10 ಮಂದಿ ಗಂಭೀರ

Public TV
1 Min Read

ಬಿಹಾರ: ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಟಿನ್ ಶೆಡ್ ಕುಸಿದು ಅವಘಡ ಸಂಭವಿಸಿದ್ದು, ನೂರಾರು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ (Bihar) ಸರನ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಛಾಪ್ರಾದ (Chhapra) ಸಿಸುಪರ್‌ನಲ್ಲಿ ಮಹಾವೀರ ಮೇಳದ ವೇಳೆ ಈ ಘಟನೆ ನಡೆದಿದೆ. ಬಿಹಾರ ಸರನ್ (Saran) ಜಿಲ್ಲೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, ಕಿಕ್ಕಿರಿದು ಕುಣಿಯುತ್ತಿದ್ದ ವೇಳೆ ಶಿಥಿಲಗೊಂಡು ಶೆಡ್ ಬಿದ್ದಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

ಕಾರ್ಯಕ್ರಮ ವೀಕ್ಷಿಸಲು ದಾರಿಯುದ್ದಕ್ಕೂ ಗ್ರಾಮಸ್ಥರು ನಿಂತಿದ್ದರು. ಕೆಲವರು ಟಿನ್ ಶೆಡ್‌ನ ಮೇಲೆ ಹತ್ತಿದ್ದು ಶೆಡ್ ಬೀಳುವುದಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಭವಿಸಿದ ತಕ್ಷಣ ಜನರು ಚಲ್ಲಾಪಿಲ್ಲಿಯಾಗಿ ಓಡಲು ಪ್ರಾರಂಭಿಸಿದ್ದು, ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬೆಳಗಾವಿ: ಸಾಲಗಾರ ಪತಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿ, ಅತ್ತೆ ಅರೆಸ್ಟ್

ಗಾಯಾಳುಗಳನ್ನು ತಕ್ಷಣ ಸ್ಥಳಿಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಯಿತು. ಈ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಗರಣಗಳಿಂದಾಗಿ ಕಾಂಗ್ರೆಸ್ ಸರ್ಕಾರ ಕೋಮಾಗೆ ಜಾರಿದೆ, ಅಭಿವೃದ್ಧಿ ನಡೆಯುತ್ತಿಲ್ಲ: ಅಶೋಕ್

Share This Article