ಸಮಯ ಕೂಡಿ ಬರಲಿ: ಗುಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

Public TV
1 Min Read

ದುವೆ ನಂತರ ಸಿನಿಮಾ ರಂಗದಿಂದಲೇ ದೂರವಾಗಿದ್ದಾರೆ ನಟಿ ರಾಧಿಕಾ ಪಂಡಿತ್. ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆ ಇರುವಾಗಲೇ ಮದುವೆ, ಸಂಸಾರ, ಮಕ್ಕಳು ಕಾರಣದಿಂದಾಗಿ ಮತ್ತೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ರಾಧಿಕಾ ಪಂಡಿತ್ (Radhika Pandit) ಮತ್ತು ಸಿನಿಮಾ ರಂಗಕ್ಕೆ ಬರಬೇಕು. ಅಭಿಮಾನಿಗಳನ್ನು ರಂಜಿಸಬೇಕು ಅನ್ನುವುದು ಅಸಂಖ್ಯಾತ ಅಭಿಮಾನಿಗಳ ಮನವಿ ಆಗಿತ್ತು.

ಹೌದು, ಮತ್ತೆ ರಾಧಿಕಾ ಅವರನ್ನು ಸ್ಕ್ರೀನ್ ಮೇಲೆ ನೋಡಬೇಕು ಎನ್ನುವುದು ಅವರ ಫ್ಯಾನ್ಸ್ ಬೇಡಿಕೆಯಾಗಿತ್ತು. ಅದಕ್ಕೆ ಈಗ ರಾಧಿಕಾ ಸ್ಪಂದಿಸಿದ್ದಾರೆ. ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ರಾಧಿಕಾ, ಸಮಯ ಕೂಡಿ ಬರಲಿ ಸಿನಿಮಾ ರಂಗಕ್ಕೆ ಮತ್ತೆ ಬರುತ್ತೇನೆ ಅಂದಿದ್ದಾರೆ.

ಯಶ್ ಮತ್ತು ರಾಧಿಕಾ ಅಪರೂಪದ ಜೋಡಿ. ಸಿನಿಮಾ ಮತ್ತು ಖಾಸಗಿ ಬದುಕಿನಲ್ಲೂ ಅಷ್ಟೇ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಸತಿಪತಿಯಾದ ನಂತರ ಮತ್ತೆ ಈ ಜೋಡಿ ಜೊತೆಯಾಗಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ, ಆ ದಿನ ಯಾವತ್ತು ಬರತ್ತೋ ಕಾದು ನೋಡಬೇಕು.

 

ಸದ್ಯ ರಾಧಿಕಾ ಪಂಡಿತ್ ಕುಟುಂಬವನ್ನು ನಿಭಾಯಿಸ್ತಾ ಇದ್ದಾರೆ.  ಯಶ್ ಸಿನಿಮಾ  ಮಾಡುತ್ತಿದ್ದಾರೆ. ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಇನ್ನಷ್ಟೇ ಚಿತ್ರೀಕರಣ ಪ್ರಾರಂಭಿಸಬೇಕು. ಈ ಸಮಯದಲ್ಲಿ ರಾಧಿಕಾ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Share This Article