ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ಮಂಗಳಸೂತ್ರ, ಬಳೆ ಧರಿಸಿ ನೇಣು ಹಾಕಿಕೊಂಡ 12ರ ಪೋರ

Public TV
2 Min Read

– ಟಿಕ್‍ಟಾಕ್ ಇಲ್ಲದಿದ್ದರೆ ಮಗ ಜೀವಂತವಾಗಿರುತ್ತಿದ್ದ

ಜೈಪುರ: ಇತ್ತೀಚಿನ ದಿನಗಳಲ್ಲಿ ಮನರಜಂನೆಗೆ ಬಳಕೆಯಾಗಬೇಕಿದ್ದ ಸಾಮಾಜಿಕ ಜಾಲತಾಣ ಮನುಷ್ಯರ ಜೀವವನ್ನು ಬಲಿ ಪಡೆದುಕೊಳ್ಳುತ್ತಿದೆ. ಇದಕ್ಕೆ ಪೂರಕ ಎಂಬಂತೆ 12 ವರ್ಷದ ಬಾಲಕನೊಬ್ಬ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನೇಣು ಹಾಕಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ತಾನದ ಕೋಟಾ ಎಂಬಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, 12 ವರ್ಷದ ಬಾಲಕನೊಬ್ಬ ಟಿಕ್‍ಟಾಕ್‍ನಲ್ಲಿ ಬರುವ ವಿಡಿಯೋವನ್ನು ಸವಾಲಾಗಿ ತೆಗೆದುಕೊಂಡು ತಾನು ಅದೇ ರೀತಿ ಮಾಡಲು ಹೋಗಿ ಬಾತ್‍ರೂಮ್‍ನಲ್ಲಿ ನೇಣು ಹಾಕಿಕೊಂಡಿದ್ದಾನೆ.

ನೇಣು ಹಾಕಿಕೊಳ್ಳುವ ಮೊದಲು, ಹುಡುಗ ಮಂಗಳಸೂತ್ರ ಮತ್ತು ಬಳೆಯನ್ನು ಧರಿಸಿದ್ದಾನೆ. ನಂತರ ಅವನು ತನ್ನ ಕುತ್ತಿಗೆಗೆ ದಪ್ಪವಾದ ಲೋಹದ ಸರಪಳಿಯನ್ನು ಸುತ್ತಿಕೊಂಡು ಬಾತ್‍ರೂಮ್‍ನಲ್ಲಿ ನೇಣುಹಾಕಿಕೊಂಡಿದ್ದಾನೆ. ಪ್ರತಿದಿನ ತುಂಬ ಟಿಕ್‍ಟಾಕ್ ವಿಡಿಯೋ ನೋಡುತ್ತಿದ್ದ ಬಾಲಕ ಟಿಕ್‍ಟಾಕ್‍ನಲ್ಲಿ ಬರುವ ಹಾಗೇ ತಾನು ಮಾಡಲು ಹೋಗಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ.

ನನ್ನ ಮಗ ಇಡೀ ರಾತ್ರಿ ಟಿಕ್‍ಟಾಕ್ ಬಳಸುತ್ತಿದ್ದನು. ಅವನು ನಮಗೆ ಟಿಕ್‍ಟಾಕ್‍ನಲ್ಲಿ ಒಂದು ಸಾವಲಿನ ಬಗ್ಗೆ ಹೇಳುತ್ತಿದ್ದ. ಅದೇ ರೀತಿ ಮಂಗಳಸೂತ್ರ ಮತ್ತು ಬಳೆ ಧರಿಸಿ ಕಬ್ಬಿಣದ ಸರಪಳಿಯಿಂದ ನೇಣು ಹಾಕಿಕೊಂಡಿದ್ದಾನೆ. ಟಿಕ್‍ಟಾಕ್ ಇಲ್ಲದಿದ್ದರೆ ನನ್ನ ಮಗ ಜೀವಂತವಾಗಿ ಇರುತ್ತಿದ್ದ ಎಂದು ಬಾಲಕನ ತಂದೆ ದುಃಖ ವ್ಯಕ್ತಪಡಿಸಿದ್ದಾರೆ.

ಈ ಘಟನೆ ತಡರಾತ್ರಿ ನಡೆದಿದ್ದು, ಬೆಳಗ್ಗೆ ಬಾಲಕ ಕಾಣುತ್ತಿಲ್ಲ ಎಂದು ಮನೆಯವರು ಹುಡುಕಿದಾಗ ಅವನು ಅವರ ಮನೆಯ ಬಾತ್‍ರೂಮಿನಲ್ಲೇ ನೇಣು ಹಾಕಿಕೊಂಡಿದ್ದಾನೆ. ತಕ್ಷಣ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಗಲೇ ಬಾಲಕ ಸಾವನ್ನಪ್ಪಿದ್ದಾನೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭರತ್ ಸಿಂಗ್ ಹೇಳಿದ್ದಾರೆ.

ಕೆಳೆದ ವಾರವಷ್ಟೇ ತಮಿಳುನಾಡಿನ ಚೆನ್ನೈನಲ್ಲಿ ಟಿಕ್‍ಟಾಕ್ ಮಾಡುವುದನ್ನು ಬಿಟ್ಟು ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಪತಿ ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *