ಆ್ಯಕ್ಷನ್ ಸೀನ್ ಚಿತ್ರೀಕರಿಸುವಾಗ ಟೈಗರ್ ಶ್ರಾಫ್‌ಗೆ ಪೆಟ್ಟು

Public TV
1 Min Read

ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಟೈಗರ್ ಶ್ರಾಫ್ ಇದೀಗ ಸುದ್ದಿಯಲ್ಲಿದ್ದಾರೆ. `ಭಾಘಿ-3′ ಸಿನಿಮಾಗಾಗಿ ಚಿತ್ರೀಕರಿಸುವಾಗ ಟೈಗರ್ ಶ್ರಾಫ್‌ಗೆ ಪೆಟ್ಟಾಗಿದೆ. ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದಾರೆ.

ಜಾಕಿ ಶ್ರಾಫ್ ಪುತ್ರ, ಟೈಗರ್ ಶ್ರಾಫ್ ಬ್ರೇಕಪ್ ವಿಚಾರದ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಿನಿಮಾ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಬಿಟೌನ್‌ನ ಪ್ರತಿಭಾನ್ವಿತ ನಟ ಟೈಗರ್ ಸಿನಿಮಾ, ಶೂಟಿಂಗ್ ಅಂತಾ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುವ ಕಲಾವಿದ ಅದಕ್ಕೆ ಪೂರಕವೆಂಬಂತಹ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ:ತೆಲುಗಿನಲ್ಲಿ ಚಂದನ್ ಬ್ಯಾನ್? ಪ್ರಕರಣದಲ್ಲಿ ಏನಿದು ಹೊಸ ಟ್ವಿಸ್ಟ್!

 

View this post on Instagram

 

A post shared by Tiger Shroff (@tigerjackieshroff)

ಬಹುನಿರೀಕ್ಷಿತ ಸಿನಿಮಾ `ಭಾಘಿ 3′ ಶೂಟಿಂಗ್ ಮಾಡುವ ವೇಳೆ ನಟ ಟೈಗರ್, ಜಬರ್‌ದಸ್ತ್ ಆ್ಯಕ್ಷನ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಎಂತಹ ರಿಸ್ಕಿ ಶಾಟ್‌ಗಳನ್ನ ಎದುರಿಸಿದ್ದರು ಎಂಬ ವಿಡಿಯೋ ಶೇರ್ ಮಾಡಿದ್ದಾರೆ. ಈ ವೇಳೆ ನಟನ ಬೆನ್ನಿಗೆ ಪಟ್ಟಾಗಿದೆ. ವಿಡಿಯೋದಲ್ಲಿ ಇದನ್ನ ನೋಡಬಹುದಾಗಿದೆ. ಸಿನಿಮಾಗಾಗಿ ಮಾಡುವ ನಟನ ಸಾಹಸ, ಧೈರ್ಯ, ಶ್ರದ್ಧೆ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *