ನಾನು ಈಜಿಕೊಂಡು ಮನೆ ತಲುಪಬಹುದು: ಟೈಗರ್ ಶ್ರಾಫ್

Public TV
1 Min Read

ಮುಂಬೈ: ಮಹಾನಗರಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮುಂಬೈನಲ್ಲಿಯೂ ಸಹ ಎಡೆಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುಂಬೈನ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ನೀರನ್ನು ತೆರವುಗೊಳಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಜಲಾವೃತಗೊಂಡ ರಸ್ತೆಗಳಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಮುಂಬೈನ ರಸ್ತೆಗಳನ್ನ ನೋಡಿದ ಬಾಲಿವುಡ್ ನಟ ಟೈಗರ್ ಶ್ರಾಫ್, ನಾನು ಈಜಿಕೊಂಡು ಮನೆಗೆ ಹೋಗಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಬೀಚ್ ಬಳಿ ಕಪ್ಪು ಕನ್ನಡಕ ಧರಿಸಿ ನಿಂತಿರುವ ಫೋಟೋ ಹಾಕಿಕೊಂಡು ‘ನಾನು ಈಜಿಕೊಂಡು ಮನೆ ತಲುಪಬಹುದು’ ಎಂದು ಬರೆದುಕೊಂಡಿದ್ದಾರೆ. ಶರ್ಟ್ ಲೆಸ್ ಫೋಟೋಗೆ ಮಹಿಳಾ ಅಭಿಮಾನಿಗಳು ಫಿದಾ ಆಗಿದ್ದು, ಪೋಸ್ಟ್ ಗೆ ಲೈಕ್ ಮತ್ತು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶನಿವಾರ ರಾತ್ರಿ ಪೋಸ್ಟ್ ಇದೂವರೆಗೂ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 6 ಸಾವಿರಕ್ಕೂ ಅಧಿಕ ಕಮೆಂಟ್ ಪಡೆದಿದೆ.

https://www.instagram.com/p/B0sdzatn2YL/

ಸತತ ಮಳೆಯ ಹಿನ್ನೆಲೆಯಲ್ಲಿ ಮುಂಬೈನ ಕೆಲವು ಭಾಗಗಳಲ್ಲಿ ಲೋಕಲ್ ಟ್ರೈನ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಏಳು ವಿಮಾನಗಳ ಹಾರಾಟವನ್ನು ಕ್ಯಾನ್ಸಲ್ ಮಾಡಲಾಗಿದೆ. ಭಾನುವಾರ ಸಹ ಮುಂಬೈನ ಬಹುತೇಕ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಮುದ್ರದ ಅಲೆಗಳು 4.5 ಮೀಟರ್ ಎತ್ತರದಲ್ಲಿ ಬರುತ್ತಿವೆ. ಸ್ಥಳೀಯರು ಸಮುದ್ರ ದಡಕ್ಕೆ ತೆರಳದಂತೆ ಮತ್ತು ಮನೆಯಿಂದ ಹೊರಬರದಂತೆ ಮಹಾನಗರ ಪಾಲಿಕೆ ಸೂಚನೆಯನ್ನು ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *