ಪೊದೆಯೊಳಗೆ ಕುಳಿತಿದ್ದ ಪ್ರೇಮಿಗಳ ಮೇಲೆ ಹುಲಿ ಅಟ್ಯಾಕ್ – ಯುವಕ ಬಲಿ, ಯುವತಿ ಎಸ್ಕೇಪ್

Public TV
1 Min Read

ಮುಂಬೈ: ಪ್ರೇಮಿಗಳಿಬ್ಬರು ಏನೇ ಬಂದರೂ ಜೀವನಪೂರ್ತಿ ಸುಖವಾಗಿ ಬಾಳೋಣ ಎಂದು ಪರಸ್ಪರ ಭರವಸೆಗಳನ್ನು ನೀಡುತ್ತಾ, ಹಲವಾರು ಆಸೆ, ಆಕಾಂಕ್ಷೆಗಳನ್ನು ಕಟ್ಟಿಕೊಂಡಿದ್ದರು. ಆದರೆ ಇದೀಗ ಈ ಪ್ರೇಮಿಗಳ ಕನಸನ್ನು ಹುಲಿಯೊಂದು ಭಗ್ನಗೊಳಿಸಿದೆ.

ಹೌದು, ಪ್ರೇಮಿಗಳಿಬ್ಬರು ಕಾಡೋಂದರ ಪೊದೆಯಲ್ಲಿ ಏಕಾಂತದಲ್ಲಿದ್ದ ವೇಳೆ ಹುಲಿಯೊಂದು ಹಿಂದಿನಿಂದ ಬಂದು ದಾಳಿ ನಡೆಸಿದ ಪರಿಣಾಮ ಯುವಕ ಸಾವನ್ನಪ್ಪಿದ್ದು, ಯುವತಿ ಓಡಿ ಹೋಗಿ ಅದೃಷ್ಟವಶಾತ್ ಪ್ರಾಣವನ್ನು ಉಳಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗುರದ ವಾತ್ಸಾ ಅರಣ್ಯದಲ್ಲಿ ನಡೆದಿದೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

ಮೃತನನ್ನು ಚೋಪ್ (ಕೋರೆಗಾಂವ್) ನಿವಾಸಿ ಅಜಿತ್ ಸೋಮೇಶ್ವರ ನಾಕಾಡೆ (21) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಅಜಿತ್ ತನ್ನ ಪ್ರಿಯತಮೆಯೊಂದಿಗೆ ಕಾಡಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ನಂತರ ಈ ಕುರಿತಂತೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯುವಕನ ಶವವನ್ನು ಪತ್ತೆ ಹಚ್ಚಿದ್ದಾರೆ. ಯುವಕನ ಮುಖ ಮತ್ತು ಬೆನ್ನಿನ ಭಾಗವನ್ನು ಹುಲಿ ಸಂಪೂರ್ಣವಾಗಿ ತಿಂದು ಹಾಕಿದ್ದು, ಇದೀಗ ಅರಣ್ಯಾಧಿಕಾರಿಗಳು ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನೂ ಘಟನೆಯಲ್ಲಿ ಯುವತಿಗೂ ಕೂಡ ಗಂಭೀರ ಗಾಯಗೊಂಡಿದ್ದು, ಇದೀಗೆ ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸಾವಿರ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಮಸ್ಕ್ ಯೋಜನೆ

ನಗರದಿಂದ ಹೊರಗಡೆ 12 ಕಿ.ಮೀ ದೂರದಲ್ಲಿರುವ ಈ ಕಾಡಿನಲ್ಲಿ ಹುಲಿ ಇರುವುದು ಗ್ರಾಮಸ್ಥರಿಗೆ ಮೊದಲೇ ಗೊತ್ತಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೋರ್ಡ್‍ಗಳನ್ನು ಸಹ ಹಾಕಲಾಗಿತ್ತು. ಆದರೂ ಅಜಿತ್ ತನ್ನ ವಾಹನವನ್ನು ನಿಲ್ಲಿಸಿ ಹುಡುಗಿಯನ್ನು ಕಾಡಿನ ಪ್ರದೇಶದಲ್ಲಿ ಕರೆದೊಯ್ದು, ನಂತರ ಪೊದೆಯೊಂದರಲ್ಲಿ ಏಕಾಂತದಲ್ಲಿದ್ದಾಗ ಏಕಾಏಕಿ ಹುಲಿ ಹಿಂದಿನಿಂದ ಬಂದು ದಾಳಿ ಮಾಡಿದೆ. ಈ ವೇಳೆ ಹುಲಿ ಬಾಯಿಗೆ ಯುವಕ ಸಿಕ್ಕಿ ಸಾವನ್ನಪ್ಪಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *