ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದಲ್ಲಿ ಟಿಕೆಟ್‌ ದರ ಹೆಚ್ಚಳ

Public TV
2 Min Read

– ವಿದೇಶಿಗರ ಟಿಕೆಟ್‌ ದರ 600 ರೂ.ಗೆ ಏರಿಕೆ

ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜ ಸಾಗರ (KRS) ಬೃಂದಾವನದ ದರ ಹೆಚ್ಚಳ ಬೆನ್ನಲ್ಲೇ, ಪಕ್ಷಿ ಕಾಶಿ ಎಂದೇ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ (Ranganathittu Bird Sanctuary) ಪ್ರವೇಶ ದರ ಹಾಗೂ ಬೋಟಿಂಗ್ ದರ ಹೆಚ್ಚಳ ಮಾಡಿ ಪ್ರವಾಸಿಗರಿಗೆ ಮತ್ತೊಂದು ಬರೆ ಎಳೆದಿದೆ.

ರಂಗನತಿಟ್ಟು ಪಕ್ಷಿಧಾಮವನ್ನ ಮೈಸೂರು ವನ್ಯಜೀವಿ ವಿಭಾಗ (Mysuru Wiledlife Department) ನಿರ್ವಹಣೆ ಮಾಡುತ್ತಿದ್ದು, ಆಗಸ್ಟ್ 1ರಿಂದ ದರ ಹೆಚ್ಚಿಸಿ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಿದೆ. ಕಾವೇರಿ ಜಲಾನಯದ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಿದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಪಕ್ಷಿಧಾಮಕ್ಕೆ ಪ್ರವೇಶ ಹಾಗೂ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆ (Rain) ಪ್ರಮಾಣ ಕಡಿಮೆಯಾಗಿದ್ದು, ನಿರ್ಬಂಧ ತೆರವುಗೊಳಿಸಲಾಗಿದೆ. ಇದನ್ನೂ ಓದಿ: RCB ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತ – ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆರ್‌.ಅಶೋಕ್‌ ಆಗ್ರಹ

ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟಿರುವ ಶ್ರೀರಂಗಪಟ್ಟಣ (Srirangapatna) ದ್ವೀಪ ನಗರ ಎಂದೇ ಹೆಸರಾಗಿದೆ. ಪ್ರವಾಸಿಗರ ನೆಚ್ಚಿನ ತಾಣ ವಿಶ್ವವಿಖ್ಯಾತ ಕೃಷ್ಣರಾಜ ಸಾಗರ ಸೇರಿದಂತೆ ಚಾರಿತ್ರಿಕ ಮಹತ್ವ ಹೊಂದಿರುವ ಪ್ರಸಿದ್ಧ ಸ್ಥಳಗಳು ಇಲ್ಲಿವೆ. ಆದ್ದರಿಂದ ಇಲ್ಲಿಗೆ ನೆರೆ ರಾಜ್ಯಗಳಿಂದಷ್ಟೇ ಅಲ್ಲದೇ ನಿತ್ಯ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ

ಮೈಸೂರು ದಸರಾ ಸಮೀಪಿಸುತ್ತಿದ್ದಂತೆ ಪಕ್ಷಿಧಾಮದ ಪ್ರವೇಶ ದರ ಹಾಗೂ ಬೋಟಿಂಗ್ ದರ ಹೆಚ್ಚಳ ಮಾಡಿರುವುದು ಪ್ರವಾಸಿಗರನ್ನ ಕೆರಳಿಸಿದೆ. ಮೈಸೂರು ದಸರಾಕ್ಕೆ ಬರುವ ಬಹುತೇಕರು ನೆಚ್ಚಿನ ಪ್ರವಾಸಿ ಸ್ಥಳಗಳಾದ ಶ್ರೀರಂಗಪಟ್ಟಣ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಕಟುಂಬದ ಜತೆ ಒಂದಷ್ಟು ಸಮಯ ಕಳೆಯಲು ಬರುವವರಿಗೆ ದರ ಹೆಚ್ಚಳವಾಗಿರುವುದು ತಮ್ಮ ಕಿಸಿಗೆ ಕತ್ತರಿ ಬೀಳಲಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೃಷ್ಣರಾಜ ಸಾಗರ (ಕೆಆರ್‌ಎಸ್) ಬೃಂದಾವನ ಪ್ರವೇಶ ದರ ಹೆಚ್ಚಳ ಮಾಡಿ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ನಡುವೆಯೇ ಪ್ರಸಿದ್ದ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಪ್ರವೇಶ ದರ ಹಾಗೂ ಬೋಟಿಂಗ್ ದರವನ್ನ ಹೆಚ್ಚಳ ಮಾಡಿದೆ. ಇದು ಪ್ರವಾಸಿಗರಿಗೆ ಬರೆ ಎಳೆದಂತಾಗಿದೆ. ಇದನ್ನೂ ಓದಿ: ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಎಂಟ್ರಿ ಟಿಕೆಟ್‌ ದರ ಯಾರಿಗೆ ಎಷ್ಟು?
ವಯಸ್ಕರಿಗೆ 75 ರೂ. ಇದ್ದ ಪ್ರವೇಶ ದರವನ್ನ 80 ರೂ. ಗಳಿಗೆ ಹೆಚ್ಚಿಸಲಾಗಿದೆ. ಇನ್ನೂ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ 25 ರೂ. ಇದ್ದ ಪ್ರವೇಶ ದರವನ್ನು 40 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿದೇಶಿಗರಿಗೆ 500 ರೂ. ಇದ್ದ ಪ್ರವೇಶ ದರವನ್ನು ಪ್ರಸ್ತುತ 600 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿದೇಶಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ 250 ರೂ. ಇದ್ದ ಪ್ರವೇಶ ದರವನ್ನು 300ಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ. ಬ್ಯಾಟರಿ ಆಪರೇಟೆಡ್ ವಾಹನದ ದರವನ್ನು 75 ರಿಂದ 100 ಮಕ್ಕಳಿಗೆ 35 ರಿಂದ 50 ರೂ. ಹೆಚ್ಚಿಸಲಾಗಿದೆ. ಮೋಟಾರ್ ಸೈಕಲ್ 15 ರಿಂದ 20, ಆಟೋ ರಿಕ್ಷಾ ದರವನ್ನ ಮಾತ್ರ ಯತಾವತ್ತಾಗಿರಿಸಿದೆ. ಕಾರು, ಜೀಪು 60 ರಿಂದ 70ರೂ.ಗೆ ಹೆಚ್ಚಿಸಿದೆ.

Share This Article