ಜೋಗ ವೀಕ್ಷಿಸಲು 2 ಗಂಟೆ ಸಮಯ ನಿಗದಿ – ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರು ಆಕ್ರೋಶ

Public TV
1 Min Read

ಶಿವಮೊಗ್ಗ: ಜೋಗ ಜಲಪಾತ (Jog Falls) ನೋಡಲು ಬರುವ ಪ್ರವಾಸಿಗರಿಗೆ ಜೋಗ ನಿರ್ವಹಣಾ ಪ್ರಾಧಿಕಾರ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ಪ್ರವಾಸಿಗರು (Tourists) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋಗ ಜಲಪಾತದಲ್ಲಿ ಅಭಿವೃದ್ದಿ ಕಾರ್ಯ ಪೂರ್ಣಗೊಳಿಸುವ ಮೊದಲೇ ಶುಲ್ಕ ಹೆಚ್ಚಿಸಿ, ಜೋಗ ನಿರ್ವಹಣಾ ಪ್ರಾಧಿಕಾರವು ಪ್ರವಾಸಿಗರಿಂದ ಹಣ ವಸೂಲಿಗೆ ಇಳಿದಿದೆ. ಹಾಗೆಯೇ ಜೋಗದ ಸೌಂದರ್ಯ ನೋಡಲು 2 ಗಂಟೆಯ ಅವಧಿ ನಿಗದಿ ಮಾಡಿದೆ. ಇದರಿಂದಾಗಿ 2 ಗಂಟೆಯೊಳಗೆ ಜೋಗದ ಪರಿಸರ ನೋಡಲು ಸಾಧ್ಯವೇ? ಎಂದು ನಿರ್ವಹಣಾ ಪ್ರಾಧಿಕಾರದ ನಡೆಗೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

ಬಸ್‌ಗೆ 150 ರೂ. ಇದ್ದ ಶುಲ್ಕ 200 ರೂ., ಕಾರಿಗೆ 50 ರೂ. ಇದ್ದ ಶುಲ್ಕ 80 ರೂ. ಮತ್ತು ಒಬ್ಬ ಪ್ರವಾಸಿಗನಿಗೆ 10 ರೂ. ಇದ್ದ ಶುಲ್ಕ 20 ರೂ.ಗೆ ಏರಿಕೆ ಮಾಡಲಾಗಿದೆ.

ಪ್ರಕೃತಿದತ್ತವಾಗಿರುವ ಜಲಪಾತ ವೀಕ್ಷಣೆಗೆ ಶುಲ್ಕ ದುಬಾರಿ ಮಾಡಲಾಗುತ್ತಿದೆ ಏಕೆ? ಪ್ರವಾಸಿಗರಿಂದ ಈ ರೀತಿ ಸುಲಿಗೆ ಏಕೆ? ಜಲಪಾತ ಪೂರ್ಣ ಅಭಿವೃದ್ಧಿಗೊಳಿಸದೇ ಶುಲ್ಕ ಹೆಚ್ಚಳ ಬೇಡ ಎಂದು ಸ್ಥಳಿಯರಿಂದಲೇ ಜೋಗ ನಿರ್ವಾಹಣಾ ಪ್ರಾಧಿಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

Share This Article