ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಿಮಿಕ್ರಿ ಮಾಡಿದ ತುಕಾಲಿ ಸಂತು

By
2 Min Read

ತುಕಾಲಿ ಸಂತು (Tukali Santu) ಅಂದರೆ ಸುದೀಪ್ (Sudeep) ಅವರಿಗೆ ವಿಶೇಷ ಪ್ರೀತಿ. ಹಾಗಾಗಿ ವೀಕೆಂಡ್ ಗೆ ಬಂದಾಗೆಲ್ಲ ಹೆಚ್ಚೆಚ್ಚು ಸಂತುರನ್ನೇ ಮಾತನಾಡಿಸ್ತಾರೆ ಕಿಚ್ಚ. ಕಾಲೆಳೆಯುತ್ತಾರೆ, ತಮಾಷೆ ಮಾಡ್ತಾರೆ. ಅವರ ಮೂಲಕವೇ ಇನ್ನೇನೋ ವಿಷಯವನ್ನು ತೆಗೆಸಲು ಪ್ರಯತ್ನಿಸ್ತಾರೆ. ಕಾರಣ, ಬಿಗ್ ಬಾಸ್ ಮನೆಯನ್ನೂ ಲವ್ಲಿಯಾಗಿ ಇಡೋದೇ ಈ ಸಂತೋಷ್. ಪ್ರಸಂಗ ಯಾವುದೇ ಇರಲಿ, ತುಕಾಲಿ ಇದ್ದರೆ ಅಲ್ಲಿ ನಗೆ ಹಬ್ಬ ಗ್ಯಾರಂಟಿ. ಹೀಗಾಗಿ ಸಂತು ಕಂಡರೆ ಸುದೀಪ್ ಅವರಿಗೆ ಎಲ್ಲಿಲ್ಲದ ಪ್ರೀತಿ.

ಇಂತಹ ತುಕಾಲಿ ಸಂತೋಷ್ ಇವತ್ತು ಸುದೀಪ್ ಅವರನ್ನೇ ಕಾಲೆಳೆದಿದ್ದಾರೆ. ಘಟನೆಯೊಂದಕ್ಕೆ ಸುದೀಪ್ ಹೇಗೆ ಸ್ಪಂದಿಸುತ್ತಾರೆ, ಹೇಗೆಲ್ಲ ಮಾತನಾಡುತ್ತಾರೆ ಎನ್ನುವುದನ್ನು ಮಿಮಿಕ್ರಿ (Mimicry) ಮಾಡಿದ್ದಾರೆ. ಡ್ರೋನ್ ಪ್ರತಾಪ್ ವಿಚಾರವಾಗಿ ನಡೆದ ಮಾತುಕತೆಯಲ್ಲಿ ಸುಖಾಸುಮ್ಮನೆ ಸುದೀಪ್ ಅವರನ್ನು ಎಳೆತಂದಿದ್ದಾರೆ. ಗೇಲಿ ಮಾಡಿದ್ದಾರೆ. ಅದನ್ನು ಕೇಳಿ ಮನೆಮಂದಿ ನಕ್ಕಿದ್ದಾರೆ.

ಬಿಗ್ ಬಾಸ್ (Bigg Boss Kannada) ಮನೆಯ ಅಂಗಳದಲ್ಲಿ ಹರಟೆ ಹೊಡೆಯುತ್ತಾ ಕೂತಿದ್ದಾರೆ ಸಂತು, ಡ್ರೋನ್ ಪ್ರತಾಪ್, ವಿನಯ್, ಮೈಕಲ್, ರಕ್ಷಕ್ ಮತ್ತಿತರರು. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಕುರಿತಾಗಿ ಮಾತುಕತೆ ಶುರುವಾಗುತ್ತದೆ. ಸಂತು ಆಡಿದ ಮಾತಿಗೆ ಡ್ರೋನ್ ಬಿದ್ದು ಬಿದ್ದು ನಗುತ್ತಾರೆ. ‘ಗುರು.. ಹೀಗ್ ನಕ್ಕು ತಲೆಬುರುಡೆ ಒಡ್ಕೊಂಡಿಯಾ. ನೀನ ಹತ್ತಿರ ಇದ್ದರೆ ನಾನು ಮಾತೇ ಆಡಲ್ಲ’ ಎನ್ನುತ್ತಾ.. ಈ ಸನ್ನಿವೇಶಕ್ಕೆ ಸುದೀಪ್ ಅವರು ಹೇಗೆ ರಿಯ್ಯಾಕ್ಟ್ ಮಾಡಬಹುದು ಎನ್ನುವುದನ್ನೂ ಸಂತು ಮಿಮಿಕ್ರಿ ಮಾಡಿದ್ದಾರೆ.

 

ಹೌದು, ಸುದೀಪ್ ಹೇಳುವ ಧಾಟಿಯಲ್ಲಿಯೇ ತುಕಾಲಿ ಮಾತನಾಡಿದ್ದಾರೆ. ‘ಪ್ರತಾಪ್ ಅವರ ತಲೆ ಒಡೆಯುವುದಕ್ಕೆ ಕಾರಣರಾದ ತುಕಾಲಿ ಸಂತು ಅವರೇ.. ನೀವು ನಗ್ಸಿ.. ಆದರೆ, ಕೆಳಗೆ ಬಿಳ್ಸಿ ತಲೆ ಒಡೀಬೇಡಿ..’ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಹೇಳಿ ಎಲ್ಲರನ್ನೂ ನಗಿಸಿದ್ದಾರೆ. ಸುದೀಪ್ ಕುರಿತಾಗಿ ತಮಾಷೆ ತಮಾಷೆಯಾಗಿಯೇ ತುಕಾಲಿ ಮಾತನಾಡಿದ್ದಾರೆ. ಆದರೆ, ಈ ಬಾರಿ ವೀಕೆಂಡ್ ನಲ್ಲಿ ಸುದೀಪ್ ಈ ವಿಷಯದ ಕುರಿತು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್