ಪ್ರಿಯಕರನ ಜೊತೆ ಸೇರಿ ಪತಿ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತಿನ ಮೇಲೆ ಕಾಲಿಟ್ಟು ಹತ್ಯೆಗೈದ ಪತ್ನಿ!

Public TV
1 Min Read

–  30 ಕಿಮೀ ಶವ ಸಾಗಿಸಿ, ಬಾವಿಗೆಸೆದಿದ್ದ ಕಿರಾತಕಿ

ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು (Husband) ಪತ್ನಿ (Wife) ಹಾಗೂ ಆಕೆಯ ಪ್ರಿಯಕರನ ಸೇರಿ ಬರ್ಬರವಾಗಿ ಹತ್ಯೆಗೈದ ಘಟನೆ ತಿಪಟೂರು (Tiptur) ತಾಲೂಕಿನ ಕಾಡುಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಶಂಕರಮೂರ್ತಿ (50) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಗಳನ್ನು ಸುಮಂಗಳ ಹಾಗೂ ಆಕೆಯ ಪ್ರಿಯಕರ ನಾಗರಾಜು ಎಂದು ಗುರುತಿಸಲಾಗಿದೆ. ಜೂ.24ರಂದು ಆರೋಪಿಗಳು ಶಂಕರಮೂರ್ತಿ ಕಣ್ಣಿಗೆ ಖಾರದ ಪುಡಿ ಎರಚಿ, ದೊಣ್ಣೆಯಿಂದ ಹೊಡೆದು, ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಂದಿದ್ದರು. ಇದನ್ನೂ ಓದಿ: ಮಂಗಳೂರು | ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ ಬಲಿ!

ತಿಪಟೂರು ನಗರದ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಸುಮಂಗಳ, ಪಕ್ಕದ ಹಳ್ಳಿಯ ಕರಡಾಳು ಸಂತೆ ಗ್ರಾಮದ ನಾಗರಾಜು ಜೊತೆ ಸಂಬಂಧ ಹೊಂದಿದ್ದಳು. ಇದೇ ಕಾರಣಕ್ಕೆ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಕೊಲೆ ಮಾಡಿದ ಬಳಿಕ ಮೃತದೇಹವನ್ನ ಗೋಣಿಚೀಲದಲ್ಲಿ ತುಂಬಿ 30 ಕಿಲೋಮೀಟರ್ ದೂರು ಸಾಗಿಸಿ, ತುರುವೇಕೆರೆ ತಾಲೂಕಿನ ದಂಡನಿಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಬಾವಿಯೊಂದಕ್ಕೆ ಎಸೆದಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮೊದಲು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದ ನೊಣವಿನಕೆರೆ ಪೊಲೀಸರು. ಶಂಕರಮೂರ್ತಿಯ ತೋಟದ ಬಳಿ ತೆರಳಿ ಪರಿಶೀಲಿಸಿದ್ದರು. ಈ ವೇಳೆ, ಶಂಕರಮೂರ್ತಿ ಮಲಗಿದ್ದ ಹಾಸಿಗೆ ಮೇಲೆ ಖಾರದ ಪುಡಿ ಹಾಗೂ ವ್ಯಕ್ತಿಯೊಬ್ಬರನ್ನ ಎಳೆದಾಡಿದ್ದ ಗುರುತು ಪತ್ತೆಯಾಗಿತ್ತು. ಅನುಮಾನ ಬಂದು ತನಿಖೆಯನ್ನ ಚುರುಕು ಮಾಡಲಾಗಿತ್ತು. ಪತ್ನಿ ಸುಮಂಗಳನ್ನ ವಿಚಾರಣೆ ನಡೆಸಿ ಸಿಡಿಆರ್ ಪರಿಶೀಲಿಸಿದಾಗ, ಕೃತ್ಯ ಬಯಲಾಗಿದೆ. ತೋಟದ ಮನೆಯಲ್ಲಿ ಯಾರೊಂದಿಗೂ ಸಂಪರ್ಕ ಇರದೆ ತನ್ನ ಪಾಡಿಗೆ ಶಂಕರಮೂರ್ತಿ ಇರುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ

Share This Article