ಬೆಳಗಾವಿ | ಚಳಿಗೆ ಇದ್ದಿಲಿನಿಂದ ಬೆಂಕಿ ಹಾಕಿ ನಿದ್ರೆ; ಉಸಿರುಗಟ್ಟಿ ಚಿರನಿದ್ರೆಗೆ ಜಾರಿದ ಮೂವರು ಯುವಕರು

Public TV
1 Min Read

ಬೆಳಗಾವಿ: ಹವಾಮಾನ ಏನು ಬೇಕಾದರೂ ಮಾಡಬಹದು ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಸಿಕ್ಕಿದೆ. ಬಿಸಿಲು ಜಾಸ್ತಿಯಾದಾಗ ಕೆಟ್ಟ ಬಿಸಿಲು, ಮಳೆ ಜಾಸ್ತಿಯಾದಾಗ ರಣ ಮಳೆ ಆದರೆ ಥಂಡಿ! ಬಲಿ ತಡೆಯಬಹುದು ಎಂದೆನಿಸಲು ಸಾಧ್ಯವಾ? ಹಾಗಾದ್ರೆ ಮುಂದೆ ಓದಿ…

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ವಾಪಸ್ ಆಗಿದ್ದ ಮೂವರು ಯುವಕರು ಹೆಣವಾದ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ. ಯುವಕರ ಸಾವಿಗೆ ಚಳಿಯೇ ಕಾರಣವಾಯ್ತಾ ಎಂಬ ಪ್ರಶ್ನೆಗಳು ಸದ್ಯ ಕಾಡುತ್ತಿವೆ. ಕೊರೆಯುವ ಚಳಿಯಿಂದ ಹಾಗೂ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಯುವಕರು ಇದ್ದಿಲು ಬೆಂಕಿ ಹಾಕಿಕೊಂಡು ಮಲಗಿದ್ದರು ಎನ್ನಲಾಗಿದೆ. ಈ ವೇಳೆ ದಟ್ಟ ಹೊಗೆ ಹಾಗೂ ಸರಿಯಾದ ಆಮ್ಲಜನಕ ಪೂರೈಕೆಯಾಗದೇ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಓರ್ವ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಕೊರೆಯುವ ಚಳಿ ಹಾಗೂ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಲಗುವ ಕೋಣೆಯಲ್ಲಿ ಇದ್ದಿಲುಬೆಂಕಿ ಹಾಕಿಕೊಂಡು ಮಲಗಿದ್ದೆ ತಪ್ಪಾಯ್ತಾ ಎಂಬ ಪ್ರಶ್ನೆಗಳು ಸಧ್ಯ ಎಲ್ಲರನ್ನ ಕಾಡುತ್ತಿವೆ. ಉಸಿರುಗಟ್ಟಿ ಮೂವರ ಯುವಕರ ಸಾವನ್ನಪ್ಪಿದ್ದರೆ ಓರ್ವನ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿಯಿಂದ ಸಂಜೆ 4 ಗಂಟೆಯವರೆಗೂ ಯಾರೇ ಬಾಗಿಲು ಬಡಿದರೂ ಸಹ ಕೇಳಿಲ್ಲ ಹಾಗೂ ಬಾಗಿಲು ತೆರೆದಿಲ್ಲ ಕೋಣೆಯಲ್ಲಿ ಎಲ್ಲಿಯೂ ವೆಂಟಿಲೇಶನ್ ಇಲ್ಲದೇ ಆಮ್ಲಜನಕ ಕೊರತೆಯಿಂದ ರಿಹಾನ್, ಮೊಹಿನ್, ಸರ್ಫರಾಜ ಎಂಬ ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ಧು ಶಾಹಾನವಾಜ ಸ್ಥಿತಿ ಗಂಭೀರವಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿಯಲ್ಲಿ ಸಂಭವಸಿರೋ ಈ ಘೋರ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ. ಯುವರಕ ಸಾವು ಸ್ವಾಭಾವಿಕವೋ ಅಥವಾ ಇನ್ಯಾರದ್ದೋ ಕೈವಾಡವಿದೆಯೋ
ಎನ್ನುವ ನಿಟ್ಟಿನಲ್ಲೂ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article