ಪಿಎಫ್‌ಐ ಮುಖಂಡನ ಹತ್ಯೆ – ಮೂವರು ಆರ್‌ಎಸ್‌ಎಸ್‌ ಕಾರ್ಯಕರ್ತರು ಅರೆಸ್ಟ್‌

Public TV
1 Min Read

ತಿರುವನಂತಪುರಂ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಪಿಎಫ್‌ಐ ಮುಖಂಡನ ಹತ್ಯೆ ನಡೆಸಿದ ಆರೋಪದ ಮೇಲೆ ಮೂವರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ರಮೇಶ್, ಅರುಮುಘನ್ ಮತ್ತು ಸರವಣನ್ ಮೂವರು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕನ ಹತ್ಯೆ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ. ಸುಬೈರ್ (43) ಎಂಬಾತ ನವೆಂಬರ್ 2021 ರಲ್ಲಿ ಆರ್‌ಎಸ್‌ಎಸ್‌ ನಾಯಕ ಸಂಜಿತ್ ಸಾವಿಗೆ ಕಾರಣನಾಗಿದ್ದ ಎನ್ನಲಾಗಿದ್ದು, ಅದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವಿಜಯ್ ಸಾಖರೆ ತಿಳಿಸಿದ್ದಾರೆ. ಇದನ್ನೂ ಓದಿ: ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್

ಸಂಜಿತ್ ಹತ್ಯೆಯ ತನಿಖೆಯಲ್ಲಿ ಸುಬೈರ್ ಭಾಗಿಯಾಗಿರುವುದು ಬಹಿರಂಗವಾಗಿಲ್ಲ. ಆದರೆ ಸಂಜಿತ್‌ನ ಹತ್ಯೆಯ ನಂತರ ರಮೇಶ್, ಪಿಎಫ್‌ಐ ಮುಖಂಡನ ಕೊಲೆಗೆ ಯೋಜನೆ ರೂಪಿಸಲು ಮುಂದಾಗಿದ್ದ. ಬಂಧಿತರಾಗಿರುವ ಮೂವರು ಅವನನ್ನು ಕೊಲ್ಲಲು ಒಂದೆರಡು ಬಾರಿ ಪ್ರಯತ್ನಿಸಿದ್ದರು. ಆದರೆ ಆ ಪ್ರದೇಶದಲ್ಲಿ ಪೊಲೀಸರ ಇದ್ದಿದ್ದರಿಂದಾಗಿ ಹತ್ಯೆ ಸಂಚು ಯಶಸ್ವಿಯಾಗಲಿಲ್ಲ. ಏಪ್ರಿಲ್ 15 ರಂದು ಮತ್ತೆ ಬಂದು ಕೊಲೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಒಂದರ ಹಿಂದೆ ಒಂದು ಎಂಬಂತೆ ಬಿಜೆಪಿ-ಆರ್‌ಎಸ್‌ಎಸ್ ಮತ್ತು ಎಸ್‌ಡಿಪಿಐ-ಪಿಎಫ್‌ಐ ಸಂಘಟನೆ ಒಳಗೊಂಡ ಹತ್ಯೆಗಳು ಕೇರಳದಲ್ಲಿ ನಡೆದಿದ್ದು, ಇದು ಎರಡನೇ ಘಟನೆಯಾಗಿದೆ. ಇದನ್ನೂ ಓದಿ: ಪೋಷಕರು ಆಯ್ಕೆ ಮಾಡಿದ ಹುಡ್ಗ ಇಷ್ಟವಿಲ್ಲವೆಂದು ಸರ್ಪ್ರೈಸ್‌ ನೆಪದಲ್ಲಿ ಕತ್ತು ಕೊಯ್ದಳು

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಲಪ್ಪುಳದಲ್ಲಿ ಎಸ್‌ಡಿಪಿಐ ಮುಖಂಡ ಮತ್ತು ಬಿಜೆಪಿಯ ನಾಯಕನನ್ನು 24 ಗಂಟೆಗಳಲ್ಲಿ ಹತ್ಯೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *